ಕೊಲಂಬೊ: ಶ್ರೀಲಂಕಾದ ಸ್ಥಳೀಯ ಸಂಸ್ಥೆಗಳ ಚುನಾವಣಾ ದಿನಾಂಕವನ್ನು ಮುಂದಿನವಾರ ಘೋಷಿಸಲಾಗುವುದು ಎಂದು ಚುನಾವಣಾ ಆಯೋಗ ಶುಕ್ರವಾರ ತಿಳಿಸಿದೆ.
ಮಾ.9ರಂದು ನಿಗದಿಯಾಗಿದ್ದ ದಿನಾಂಕವನ್ನು ಆಯೋಗ ಕಳೆದ ವಾರ ಮುಂದೂಡಿತ್ತು. ‘ಹಣಕಾಸು ಇಲಾಖೆ, ಸರ್ಕಾರಿ ಮುದ್ರಣ ಮತ್ತು ಪೊಲೀಸ್ ಅಧಿಕಾರಿಗಳ ಜೊತೆ ಮುಂದಿನ ವಾರ ಚರ್ಚಿಸಿ ನಂತರ ದಿನಾಂಕ ಘೋಷಿಸಲಾಗುವುದು‘ ಎಂದು ಆಯೋಗದ ಮುಖ್ಯಸ್ಥ ನಿಮಲ್ ಪುಂಚಿಹೆವಾ ಅವರು ತಿಳಿಸಿದ್ದಾರೆ.
ಈ ಮಧ್ಯೆ 2023ರ ಬಜೆಟ್‌ನಲ್ಲಿ ಚುನಾವಣೆಗೆ ಮೀಸಲಿಟ್ಟಿರುವ ಹಣ ಬಿಡುಗಡೆ ಮಾಡುವಂತೆ ಶುಕ್ರವಾರ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.