ADVERTISEMENT

ತಮಿಳರ ಬೇಡಿಕೆಗಳಿಗೆ 13ನೇ ತಿದ್ದುಪಡಿಯೇ ಪರಿಹಾರ: ಶ್ರೀಲಂಕಾ ಅಧ್ಯಕ್ಷ ಪ್ರತಿಪಾದನೆ

ಪಿಟಿಐ
Published 5 ಜನವರಿ 2024, 15:49 IST
Last Updated 5 ಜನವರಿ 2024, 15:49 IST
ರಾನಿಲ್‌ ವಿಕ್ರಮಸಿಂಘೆ
ರಾನಿಲ್‌ ವಿಕ್ರಮಸಿಂಘೆ   

ಕೊಲಂಬೊ: ‘ರಾಜಕೀಯ ಸ್ವಾಯತ್ತತೆ ಕುರಿತು ಶ್ರೀಲಂಕಾದಲ್ಲಿ ತಮಿಳರ ದೀರ್ಘಕಾಲದ ಬೇಡಿಕೆ ಈಡೇರಿಸಲು ಭಾರತ ಸಲಹೆಯಾದ ಸಂವಿಧಾನದ 13ನೇ ತಿದ್ದುಪಡಿಯೇ ಪರಿಹಾರ’ ಎಂದು ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘೆ ಅವರು ಶುಕ್ರವಾರ ಹೇಳಿದರು.

1987ರ ಇಂಡೊ–ಶ್ರೀಲಂಕಾ ಒಪ್ಪಂದದ ಬಳಿಕ ಭಾರತವು 13ನೇ ತಿದ್ದುಪಡಿ ಕುರಿತು ಸಲಹೆ ಮಾಡಿತ್ತು. ಪ್ರಸ್ತಾಪಿತ 13ಎ ತಿದ್ದುಪಡಿಯು ಅಲ್ಪಸಂಖ್ಯಾತ ತಮಿಳು ಸಮುದಾಯದವರಿಗೆ ರಾಜಕೀಯ ಅಧಿಕಾರ ನೀಡಲು ಅವಕಾಶ ಕಲ್ಪಿಸಲಿದೆ.

ತಮಿಳರ ಪ್ರಾಬಲ್ಯವಿರುವ ಜಾಫ್ನಾದ ಕೆಲ ವೃತ್ತಿಪರರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜಕೀಯ ಅಧಿಕಾರ ಹಂಚಿಕೆಯು ಕೇವಲ ರಾಜಕೀಯ ಚಿಂತನೆಯದ್ದು ಆಗಿರಬಾರದು. ಆರ್ಥಿಕತೆಯ ವಾಸ್ತವಿಕತೆಯನ್ನು ಆಧರಿಸಿರಬೇಕು ಎಂದು ಅಭಿಪ್ರಾಯಪಟ್ಟರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.