ADVERTISEMENT

ಶ್ರೀಲಂಕಾ: ಸರ್ವ ಪಕ್ಷಗಳ ಸರ್ಕಾರ ರಚನೆಗೆ ರಾನಿಲ್ ಕರೆ ನೀಡುವ ನಿರೀಕ್ಷೆ

ಪಿಟಿಐ
Published 17 ಏಪ್ರಿಲ್ 2023, 15:51 IST
Last Updated 17 ಏಪ್ರಿಲ್ 2023, 15:51 IST
ರಾನಿಲ್‌ ವಿಕ್ರಮಸಿಂಘೆ
ರಾನಿಲ್‌ ವಿಕ್ರಮಸಿಂಘೆ   

ಕೊಲಂಬೊ: ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಸರ್ವ ಪಕ್ಷಗಳ ಸರ್ಕಾರ ರಚಿಸುವ ಸಂಬಂಧ ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘೆ ಅವರು ಮತ್ತೊಮ್ಮೆ ಕರೆ ನೀಡುವ ನಿರೀಕ್ಷೆ ಇದೆ ಎಂದು ವಿರೋಧ ಪಕ್ಷದ ಹಿರಿಯ ನಾಯಕ ಮಾನೊ ಗಣೇಸನ್‌ ಸೋಮವಾರ ತಿಳಿಸಿದರು.

ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ನೆರವು ಕಾರ್ಯಕ್ರಮದ ಕುರಿತು ಏ.25ರಂದು ಸಂಸತ್‌ನಲ್ಲಿ ಚರ್ಚೆ ನಡೆಸುವ ವೇಳೆ ಅವರು ಈ ಪ್ರಸ್ತಾವ ಇಡುವ ಸಾಧ್ಯತೆ ಇದೆ ಎಂದು ಹೇಳಿದರು.

‘ಆರ್ಥಿಕ ಬಿಕ್ಕಟ್ಟು ಪರಿಹಾರಕ್ಕಾಗಿ ಪಕ್ಷ ಭೇದ ಮರೆತು ಎಲ್ಲ ರಾಜಕೀಯ ಪಕ್ಷಗಳು ಒಂದಾಗಬೇಕು’ ಎಂದು ರಾನಿಲ್ ವಿಕ್ರಮಸಿಂಘೆ ಅವರು ಕಳೆದ ವರ್ಷ ಜುಲೈನಲ್ಲಿ ಕರೆ ನೀಡಿದ್ದರು.

ADVERTISEMENT

ದೇಶವು ಬಿಕ್ಕಟ್ಟಿನಿಂದ ಹೊರಬರಲು ₹24,608 ಕೋಟಿ ನೆರವು ನೀಡುವುದಾಗಿ ಐಎಂಎಫ್‌ ಮಾರ್ಚ್‌ನಲ್ಲಿ ತಿಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.