ADVERTISEMENT

ಶ್ರೀಲಂಕಾ ಸಂಸತ್ತಿಗೆ ಇಂದು ಚುನಾವಣೆ

ಪಿಟಿಐ
Published 13 ನವೆಂಬರ್ 2024, 19:30 IST
Last Updated 13 ನವೆಂಬರ್ 2024, 19:30 IST
ಶ್ರೀಲಂಕಾ
ಶ್ರೀಲಂಕಾ   

ಕೊಲಂಬೊ: ದ್ವೀಪರಾಷ್ಟ್ರ ಶ್ರೀಲಂಕಾದ ಸಂಸತ್ತಿಗೆ ಗುರುವಾರ ಚುನಾವಣೆ ನಡೆಯಲಿದೆ. 2022ರಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.

ಚುನಾವಣೆ ಕಾರಣಕ್ಕೆ ದೇಶದಾದ್ಯಂತ ಭದ್ರತೆಗಾಗಿ 90 ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.  ಪೊಲೀಸರ ಜೊತೆಗೆ ಸೇನೆಯನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

225 ಸದಸ್ಯ ಬಲದ ಸಂಸತ್ತಿಗೆ ಗುರುವಾರ, ಸ್ಥಳೀಯ ಸಮಯ ಬೆಳಿಗ್ಗೆ 7ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. 17 ಲಕ್ಷ ಮತದಾರರು ಹಕ್ಕು ಚಲಾಯಿಸಲಿದ್ದು, 13,314 ಮತಗಟ್ಟೆ ಸ್ಥಾಪಿಸಲಾಗಿದೆ. 

ADVERTISEMENT

ಚುನಾವಣಾ ಆಯೋಗದ ಪ್ರಧಾನ ನಿರ್ದೇಶಕ ಸಮನ್‌ ಶ್ರೀ ರತ್ನಾಯಕ ಅವರು, ಮತಗಟ್ಟೆಗಳಿಗೆ ಮತಯಂತ್ರ ಹಾಗೂ ಇತರ ಪರಿಕರಗಳನ್ನು ಪೂರೈಸಲಾಗಿದೆ ಎಂದು ತಿಳಿಸಿದ್ದಾರೆ. 

ಅಧ್ಯಕ್ಷ ಅನುರಾ ಕುಮಾರ ಡಿಸ್ಸಾನಾಯಕೆ ನೇತೃತ್ವದ ನ್ಯಾಷನಲ್‌ ಪೀಪಲ್ಸ್‌ ಪವರ್ ಪಕ್ಷದ ಜನಪ್ರಿಯತೆಯನ್ನು ಒರೆಗೆಹಚ್ಚುವ ಚುನಾವಣೆ ಇದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.