ಕೊಲಂಬೊ: ಶ್ರೀಲಂಕಾ ಅಧ್ಯಕ್ಷರ ಅಧಿಕಾರ ಮೊಟಕುಗೊಳಿಸುವ ಸಂವಿಧಾನದ 21ನೇ ತಿದ್ದುಪಡಿ ಪ್ರಸ್ತಾವವನ್ನು ಅಂಗೀಕರಿಸುವುದನ್ನು ಶ್ರೀಲಂಕಾದ ಸಚಿವ ಸಂಪುಟ ಒಂದು ವಾರ ಮುಂದೂಡಿದೆ. ಆಡಳಿತ ಪಕ್ಷದ ಕೆಲ ಸದಸ್ಯರಿಂದಲೇ ವ್ಯಕ್ತವಾದ ತೀವ್ರ ಪ್ರತಿರೋಧ ವಿಷಯದ ಚರ್ಚೆ ಮುಂದೂಡಿಕೆಗೆ ಕಾರಣವಾಗಿದೆ.
ಅಧ್ಯಕ್ಷ ಗೋಟಬಯ ರಾಜಪಕ್ಸ ಅವರಿಗೆ ಹೆಚ್ಚಿನ ಅಧಿಕಾರವನ್ನು ನೀಡುವ ಸಂವಿಧಾನದ 20ಎ ವಿಧಿಯನ್ನು ರದ್ದುಗೊಳಿಸಲು ಈಗ 21ನೇ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ. ಉದ್ದೇಶಿತ ತಿದ್ದುಪಡಿಯ ಕರಡು ಪ್ರಸ್ತಾವವನ್ನು ಸೋಮವಾರ ಸಂಪುಟ ಸಭೆಯ ಪರಾಮರ್ಶೆಗೆ ಇಡಲಾಗಿತ್ತು.
ಎಲ್ಲ ಪಕ್ಷಗಳು ಸಮ್ಮತಿ ನೀಡಿದ ನಂತರವೇ ಪ್ರಸ್ತಾವ ಅಂಗೀಕರಿಸಲು ನಿರ್ಧರಿಸಲಾಯಿತು. ಮತ್ತೆ ಮುಂದಿನ ವಾರ ಸಂಪುಟದ ಎದುರು ಮಂಡಿಸಲಾಗುವುದು ಎಂದು ಸಂಸದ ಚರಿತಾ ಹೆರತ್ ಸುದ್ದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.