ಕೊಲಂಬೊ: ತಕ್ಷಣದಿಂದ ಬುರ್ಖಾ ನಿಷೇಧಿಸಬೇಕು ಮತ್ತು ಜನಾಂಗೀಯ ಹಾಗೂ ಧರ್ಮ ಆಧರಿತ ರಾಜಕೀಯ ಪಕ್ಷಗಳ ನೋಂದಣಿ
ಯನ್ನು ಅಮಾನತು ಮಾಡಬೇಕು ಎಂದು ಶ್ರೀಲಂಕಾದ ಸಂಸದೀಯ ಸಮಿತಿ ಗುರುವಾರ ಸಂಸತ್ತಿನಲ್ಲಿ ಪ್ರಸ್ತಾವ ಮಂಡಿಸಿದೆ.
ಈ ಕುರಿತ ವಿಶೇಷ ವರದಿಯನ್ನು ಸಂಸದ ಹಾಗೂ ರಾಷ್ಟ್ರೀಯ ಭದ್ರತೆ ಕುರಿತ ಸಂಸದೀಯ ಸಮಿತಿ ಅಧ್ಯಕ್ಷ ಮಲಿತ್ ಜಯತಿಲಕ ಅವರು ಸಂಸತ್‌ನಲ್ಲಿ ಮಂಡಿಸಿದ್ದಾರೆ ಎಂದು ‘ಡೇಲಿ ಮಿರರ್’ ಪತ್ರಿಕೆ ವರದಿ ಮಾಡಿದೆ. ಹಲವು ದೇಶಗಳು ಈಗಾಗಲೇ ಬುರ್ಖಾ ನಿಷೇಧಿಸಿವೆ ಎಂದೂ ವರದಿಯಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.