ಕೊಲಂಬೊ: ಶ್ರೀಲಂಕಾದ ಅಧ್ಯಕ್ಷ ಅನುರಾ ಕುಮಾರ ಡಿಸ್ಸಾನಾಯಕೆ ಅವರು ಸೋಮವಾರ (ನ.18) ನೂತನ ಪ್ರಧಾನಿ, ಸಚಿವರನ್ನು ನೇಮಕ ಮಾಡಲಿದ್ದಾರೆ.
ಡಿಸ್ಸಾನಾಯಕೆ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪವರ್ (ಎನ್‌ಪಿಪಿ) ಪಕ್ಷವು ಸಂಸತ್‌ಗೆ ಈಚೆಗೆ ನಡೆದ ಚುನಾವಣೆಯಲ್ಲಿ ಭರ್ಜರಿ ಬಹುಮತ ಗಳಿಸಿತ್ತು. ಸಂಸತ್ತಿನ 225 ಸ್ಥಾನಗಳಲ್ಲಿ 159 ಸ್ಥಾನಗಳನ್ನು ಎನ್‌ಪಿಪಿ ಗೆದ್ದುಕೊಂಡಿದೆ. ತಮಿಳರು ಪ್ರಾಬಲ್ಯ ಹೊಂದಿರುವ ಜಾಫ್ನಾದಲ್ಲಿಯೂ ಎನ್‌ಪಿಪಿ ಅಭೂತಪೂರ್ವ ಗೆಲುವು ಪಡೆದಿತ್ತು.
‘ಹೊಸ ಸಂಪುಟವನ್ನು ಸೋಮವಾರ ನೇಮಿಸಲಿದ್ದೇವೆ. ಸಂಪುಟದ ಸದಸ್ಯ ಬಲ ಗರಿಷ್ಠ 25 ಆಗಿರಲಿದೆ’ ಎಂದು ಎನ್‌ಪಿಪಿ ಹಿರಿಯ ವಕ್ತಾರ ಟಿಲ್ವಿನ್ ಸಿಲ್ವಾ ತಿಳಿಸಿದರು.
ಗರಿಷ್ಠ 30 ಸಚಿವರ ನೇಮಕಕ್ಕೆ ಶ್ರೀಲಂಕಾ ಸಂವಿಧಾನದಲ್ಲಿ ಅವಕಾಶವಿದೆ. ಸಹಾಯಕ ಸಚಿವರನ್ನು ಸೇರಿಸಿದರೆ, 40ಕ್ಕೂ ಹೆಚ್ಚು ಸದಸ್ಯರನ್ನು ನೇಮಿಸಬಹುದು. ‘ಸಣ್ಣ ಗಾತ್ರದ ಸರ್ಕಾರ ರಚನೆಯಿಂದ ಆರ್ಥಿಕ ಹೊರೆ ಕುಗ್ಗಿಸಬಹುದು’ ಎಂದು ಟಿಲ್ವಿನ್ ಸಿಲ್ವಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.