ಕೊಲಂಬೊ: ನ್ಯಾಷನಲ್ ಪೀಪಲ್ಸ್ ಪವರ್ ಪಕ್ಷದ ನೇತೃತ್ವದಲ್ಲಿ ನೂತನವಾಗಿ ರಚನೆಯಾದ ಸರ್ಕಾರದಲ್ಲಿ ಕೇವಲ ಮೂವರು ಮಂತ್ರಿಗಳೊಂದಿಗೆ ಮೊದಲ ಸಚಿವ ಸಂಪುಟ ಸಭೆ ನಡೆಸಿದೆ.
ನೂತನವಾಗಿ ನೇಮಕಗೊಂಡ ಅಧ್ಯಕ್ಷ ಅನುರ ಕುಮಾರ ಡಿಸಾನಾಯಕೆ ಮತ್ತು ಪ್ರಧಾನ ಮಂತ್ರಿ ಡಾ.ಹರಿಣಿ ಅಮರಸೂರ್ಯ ಅವರೊಂದಿಗೆ ಸಚಿವ ಸಂಪುಟದ ವಕ್ತಾರ ವಿಜಿತ್ ಹೆರಾತ್ ಸೋಮವಾರ ಸಚಿವ ಸಂಪುಟ ಸಭೆ ನಡೆಸಿದ್ದಾರೆ.
ಇದು ಅತ್ಯಂತ ಚಿಕ್ಕ ಸಚಿವ ಸಂಪುಟ ಸಭೆ ಎಂದು ವಿಜಿತ್ ಅವರು ತಿಳಿಸಿದ್ದಾರೆ.
ನ.14 ರಂದು ಚುನಾವಣೆ ನಡೆಸುವ ಸಲುವಾಗಿ ಸಂಸತ್ತನ್ನು ಕಳೆದ ವಾರ ವಿಸರ್ಜಿಸುವ ಮೊದಲು ಅಧ್ಯಕ್ಷ ಡಿಸ್ಸಾನಾಯಕೆ ಅವರು ತಮ್ಮನ್ನು ಒಳಗೊಂಡಂತೆ ನಾಲ್ಕು ಜನರ ಸಂಪುಟವನ್ನು ನೇಮಿಸಿದ್ದರು. 25 ಮಂತ್ರಿಗಳಿಗೆ ಸಚಿವ ಸಂಪುಟವನ್ನು ಸೀಮಿತಗೊಳಿಸಲಾಗಿದೆ. ಮುಂದಿನ ಚುನಾವಣೆಯಲ್ಲಿ ಗೆದ್ದ ಬಳಿಕವೂ ಅದೇ ಸಂಖ್ಯೆಯನ್ನು ಉಳಿಸಿಕೊಳ್ಳಲಾಗುವುದು ಯಾವುದೇ ರಾಜ್ಯ ಖಾತಗೆ ಸಚಿವರನ್ನು ನೇಮಕ ಮಾಡುವುದಿಲ್ಲ ಎಂದು ವಿಜಿತ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.