ಕೊಲಂಬೊ: ಶ್ರೀಲಂಕಾ ಮಾಜಿ ಪ್ರಧಾನಿ ಮಹಿಂದ ರಾಜಪಕ್ಸ ಮತ್ತು ಅವರ ಕಿರಿಯ ಸೋದರ, ಮಾಜಿ ಹಣಕಾಸು ಸಚಿವ ಬಸಿಲ್ ರಾಜಪಕ್ಸ ಅವರ ವಿದೇಶ ಪ್ರಯಾಣಕ್ಕೆ ಇರುವ ನಿರ್ಬಂಧವನ್ನು ಸೆಪ್ಟೆಂಬರ್ 5ರವರೆಗೆ ವಿಸ್ತರಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.
ದೇಶದ ಆರ್ಥಿಕ ಬಿಕ್ಕಟ್ಟಿಗೆ ಇವರೇ ಜವಾಬ್ದಾರರೆಂದು ಆರೋಪಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಜುಲೈ 15ರಂದು ನಡೆಸಿದ ಸುಪ್ರೀಂಕೋರ್ಟ್,ಜುಲೈ 28ರವರೆಗೆ ದೇಶ ಬಿಟ್ಟು ಹೋಗದಂತೆ ನಿರ್ಬಂಧ ವಿಧಿಸಿತ್ತು. ಬಳಿಕ ಆಗಸ್ಟ್ 1 ಮತ್ತು ಆಗಸ್ಟ್ 3ರಂದು ಎರಡು ಬಾರಿ ವಿಸ್ತರಣೆ ಮಾಡಿತ್ತು.
ದೇಶದ ಆರ್ಥಿಕ ಬಿಕ್ಕಟ್ಟಿಗೆ ಬಸಿಲ್, ಮಹಿಂದ ರಾಜಪಕ್ಸ ಮತ್ತು ಕೇಂದ್ರ ಬ್ಯಾಂಕ್‌ನ ಮಾಜಿ ಗವರ್ನರ್ ಅಜಿತ್ ನಿವಾರ್ಡ್ ಕಬ್ರಾಲ್ ಅವರೇ ನೇರ ಕಾರಣ ಎಂದು ಅರ್ಜಿದಾರರ ಗುಂಪು ಆರೋಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.