ವಿಶ್ವಸಂಸ್ಥೆ (ಪಿಟಿಐ): ‘ಜಿ20 ಶೃಂಗಸಭೆ ‘ನವದೆಹಲಿ ಘೋಷಣೆ’ಯ ಮೂಲಕ, ಭಿನ್ನ ನಿಲುವಿನ ಕಾರ್ಯಪಡೆಗಳನ್ನು ಒಗ್ಗೂಡಿಸುವಲ್ಲಿ ಭಾರತ ತನ್ನ ಕೌಶಲವನ್ನು ಪ್ರದರ್ಶಿಸಿದೆ’ ಎಂದು ಆರ್ಟ್ ಆಫ್ ಲಿವಿಂಗ್‌ನ ಶ್ರೀಶ್ರೀ ರವಿಶಂಕರ್ ಶುಕ್ರವಾರ ಹೇಳಿದರು.
ಅಂತರರಾಷ್ಟ್ರೀಯ ಶಾಂತಿ ದಿನ ನಿಮಿತ್ತ ವಿಶ್ವಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಶಾಂತಿ’ ಕುರಿತು ಪ್ರವಚನ ನೀಡಿದ ಅವರು, ಜನರು, ದೇಶಗಳ ನಡುವಿನ ಸಂವಹನದ ಮಹತ್ವವನ್ನು ನವದೆಹಲಿ ಘೋಷಣೆಯು ಒತ್ತಿ ಹೇಳಿದೆ ಎಂದು ಹೇಳಿದರು.
‘ಉತ್ತಮ ಸಂವಹನ ಹಾಗೂ ನ್ಯಾಯಪ್ರಜ್ಞೆಯು ನಮ್ಮಲ್ಲಿ ಜಾಗೃತವಾಗಿದ್ದಾಗ ಮಾತ್ರವೇ ಹಿಂಸಾಚಾರ ಮುಕ್ತವಾದ ಸಮಾಜವನ್ನು ನಿರ್ಮಿಸುವುದು ಸಾಧ್ಯವಾಗಲಿದೆ’ ಎಂದೂ ಅವರು ಪ್ರತಿಪಾದಿಸಿದರು.
ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಮಿಷನ್ ಈ ಕಾರ್ಯಕ್ರಮ ಆಯೋಜಿಸಿತ್ತು. ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಪ್ರತಿನಿಧಿ ರುಚಿರಾ ಕಾಂಬೋಜ್ ಅವರು, ‘ಭಾರತದ ಶ್ರೀಮಂತ ಸಾಂಸ್ಕೃತಿಕ, ಅಧ್ಯಾತ್ಮದ ಪರಂಪರೆಗೆ ಶಾಂತಿಯೇ ಬುನಾದಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.