ವಾಷಿಂಗ್ಟನ್: ಭಾರತದ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರನ್ನು ಅಮೆರಿಕದ ವಿಶ್ವವಿದ್ಯಾಯವೊಂದು ‘ಜಾಗತಿಕ ಪೌರತ್ವ ರಾಯಭಾರಿ’ ಎಂದು ಗುರುತಿಸಿದೆ.
‘ದಿ ನಾರ್ತ್‌ಈಸ್ಟರ್ನ್ ಯುನಿವರ್ಸಿಟಿ ಸೆಂಟರ್ ಫಾರ್ ಸ್ಪಿರಿಚುವಲ್, ಡೈಲಾಂಗ್ ಮತ್ತು ಸರ್ವಿಸ್’ ಕಳೆದ ವಾರ ಗುರೂಜಿ ಅವರನ್ನು ತನ್ನ ಸಂಸ್ಥೆಯ ‘ಜಾಗತಿಕ ಪೌರತ್ವ ರಾಯಭಾರಿ’ ಎಂದು ಗುರುತಿಸಿದೆ.
ಆಧ್ಯಾತ್ಮಿಕ ಗುರುವಾಗಿ ಅವರು ಶಾಂತಿ ಸ್ಥಾಪಿಸಲು ಹಾಗೂ ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸಿ ಗೌರವಿಸಲಾಗಿದೆ ಎಂದು ತಿಳಿಸಲಾಗಿದೆ.
‘ನಾವು ರವಿಶಂಕರ್ ಗುರೂಜಿ ಅವರಿಗೆ ಕೃತಜ್ಞರಾಗಿದ್ದೇವೆ. ಮಾನವೀಯ ಮೌಲ್ಯಗಳನ್ನು ಸಾಕಾರಗೊಳಿಸಿದ ಅತ್ಯುತ್ತಮ ವ್ಯಕ್ತಿಯ ಮೂಲಕ ನಾವು ‘ಜಾಗತಿಕ ಪೌರತ್ವ ರಾಯಭಾರಿ’ಯನ್ನು ಗುರುತಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ’ ಎಂದು ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಆಧ್ಯಾತ್ಮಿಕ ಸಲಹೆಗಾರ ಅಲೆಕ್ಸಾಂಡರ್ ಡೆಲಿವರಿ ಕರ್ನ್ ಅವರು ತಿಳಿಸಿದರು.
ಅಫ್ಗಾನಿಸ್ತಾನ, ಬ್ರೆಜಿಲ್, ಕ್ಯಾಮರೂನ್, ಕೊಲಂಬಿಯಾ, ಭಾರತ,ಇಂಡೊನೇಷ್ಯಾ, ಇರಾಕ್, ಇಸ್ರೇಲ್, ಕಿನ್ಯಾ, ಕೊಸೊವೊ, ಲೆಬನಾನ್, ಮಾರಿಷಸ್, ಮೊರಾಕೊ, ನೇಪಾಳ, ಪಾಕಿಸ್ತಾನ, ರಷ್ಯಾ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ಅಮೆರಿಕದಲ್ಲಿ ಸಂಘರ್ಷ ಪರಿಹಾರಕ್ಕಾಗಿ ಅವರು ಕೆಲಸ ಮಾಡಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.