ADVERTISEMENT

ಪೊಲೀಸರು–ಮಿಲಿಟರಿ ನಡುವೆ ಘರ್ಷಣೆ: ಇಥಿಯೋಪಿಯಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಪಿಟಿಐ
Published 4 ಆಗಸ್ಟ್ 2023, 10:00 IST
Last Updated 4 ಆಗಸ್ಟ್ 2023, 10:00 IST
ಇಥಿಯೋಪಿಯಾ (ಸಾಂದರ್ಭಿಕ ಚಿತ್ರ)
ಇಥಿಯೋಪಿಯಾ (ಸಾಂದರ್ಭಿಕ ಚಿತ್ರ)   

ನೈರೋಬಿ: ಅಮ್ಹರಾ ಪ್ರದೇಶದಲ್ಲಿ ಸ್ಥಳೀಯ ಪೊಲೀಸರು ಮತ್ತು ಮಿಲಿಟರಿ ಪಡೆ ನಡುವೆ ಘರ್ಷಣೆ ಉಂಟಾದ ಹಿನ್ನಲೆಯಲ್ಲಿ ಇಥಿಯೋಪಿಯಾ ಸರ್ಕಾರ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. 

ಗಲಭೆ ಮುಂದುವರೆಯದಂತೆ ತಡೆಯಲು ಪ್ರಧಾನ ಮಂತ್ರಿ ಅಬೈ ಅಹೆಮದ್ ಅವರ ಕಚೇರಿ ಶುಕ್ರವಾರ ಬೆಳಿಗ್ಗೆ ಈ ಘೋಷಣೆ ಮಾಡಿದೆ. 

ವಾರದ ಆರಂಭದಲ್ಲಿ ಇಥಿಯೋಪಿಯಾದ ಎರಡನೇ ಅತಿ ದೊಡ್ಡ ಪ್ರದೇಶ ಎನಿಸಿಕೊಂಡ ಅಮ್ಹರಾದಲ್ಲಿ ಘರ್ಷಣೆ ಆರಂಭವಾಗಿತ್ತು. ಒಂದೆರಡು ದಿನಗಳಲ್ಲಿ ಸಂಘರ್ಷ ಪ್ರಮುಖ ಭದ್ರತಾ ಸಮಸ್ಯೆಗೆ ಕಾರಣವಾಗಿದೆ.

ADVERTISEMENT

ಅಮ್ಹರಾ ಪ್ರದೇಶದ ಭದ್ರತಾ ಪಡೆಯ ಮಿಲಿಟಿಯಾ ಸದಸ್ಯರು ಸೇನೆಯ ಮೇಲೆ ದಾಳಿ ನಡೆಸಿದ್ದು, ಪ್ರತಿಭಟನಾಕಾರರು ರಸ್ತೆಗಳನ್ನು ಬಂದ್‌ ಮಾಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಗಲಾಟೆ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ನಗರದ ಪ್ರಮುಖ ಪ್ರವಾಸಿ ಸ್ಥಳಗಳ ಭೇಟಿಯನ್ನು ನಿರ್ಬಂಧಿಸಲಾಗಿದ್ದು, ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.