ADVERTISEMENT

ಕೆನಡಾ: ವಿಕ್ಟೋರಿಯಾ, ಎರಡನೇ ಎಲಿಜಬೆತ್ ಪ್ರತಿಮೆ ಧ್ವಂಸ

ರಾಯಿಟರ್ಸ್
Published 2 ಜುಲೈ 2021, 16:11 IST
Last Updated 2 ಜುಲೈ 2021, 16:11 IST
ವಸತಿ ಶಾಲೆಗಳಲ್ಲಿ ಮಕ್ಕಳ ಅವಶೇಷಗಳು ಪತ್ತೆಯಾದ ಹಿನ್ನೆಲೆಯಲ್ಲಿ ‘ಕೆನಡಾ ದಿನ’ವಾದ ಗುರುವಾರ ರಾಣಿಯರಾದ ವಿಕ್ಟೋರಿಯಾ ಮತ್ತು ಎಲಿಜಬೆತ್ II ಅವರ ಪ್ರತಿಮೆಯನ್ನು ಉರುಳಿಸಿ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು ಚಿತ್ರ: ರಾಯಿಟರ್ಸ್‌
ವಸತಿ ಶಾಲೆಗಳಲ್ಲಿ ಮಕ್ಕಳ ಅವಶೇಷಗಳು ಪತ್ತೆಯಾದ ಹಿನ್ನೆಲೆಯಲ್ಲಿ ‘ಕೆನಡಾ ದಿನ’ವಾದ ಗುರುವಾರ ರಾಣಿಯರಾದ ವಿಕ್ಟೋರಿಯಾ ಮತ್ತು ಎಲಿಜಬೆತ್ II ಅವರ ಪ್ರತಿಮೆಯನ್ನು ಉರುಳಿಸಿ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು ಚಿತ್ರ: ರಾಯಿಟರ್ಸ್‌   

ವಿನ್ನಿಪೆಗ್‌, ಕೆನಡಾ: ವಸಾಹತುಶಾಹಿ ಸಾಮಾಜ್ಯದಲ್ಲಿ ನಡೆದ ದೌರ್ಜನ್ಯಕ್ಕೆ ವಿರೋಧ ವ್ಯಕ್ತಪಡಿಸಿರುವ ಪ್ರತಿಭಟನಕಾರರು, ರಾಣಿಯರಾದ ವಿಕ್ಟೋರಿಯಾ ಮತ್ತು ಎರಡನೇ ಎಲಿಜಬೆತ್ ಅವರ ಪ್ರತಿಮೆಯನ್ನು ಉರುಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂಲನಿವಾಸಿ ಮಕ್ಕಳಿಗಾಗಿಯೇ ವಸತಿ ಶಾಲೆಯಿದ್ದ ಸ್ಥಳದಲ್ಲಿ ಮೃತದೇಹದ ಅವಶೇಷಗಳನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ಇದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ಹಾಗಾಗಿ, ‘ಕೆನಡಾ ಡೇ’ ಆದ ಜುಲೈ 2ರಂದೇ ಪ್ರತಿಭಟನಕಾರರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ADVERTISEMENT

ಕಿತ್ತಳೆ ಬಣ್ಣದ ಉಡುಪು ಧರಿಸಿದ್ದ ಪ್ರತಿಭಟನಕಾರರು ಪ್ರತಿಮೆಯನ್ನು ಒದ್ದು, ನೃತ್ಯ ಮಾಡಿದರು. ‘ನರಮೇಧದಲ್ಲಿ ಹೆಮ್ಮೆ ಇಲ್ಲ’ ಎಂದು ಘೋಷಣೆಗಳನ್ನು ಕೂಗಿದರು.

ಮೂಲನಿವಾಸಿಗಳಿಂದ ಅವರ ಮಕ್ಕಳನ್ನು ಬಲವಂತವಾಗಿ ಪ್ರತ್ಯೇಕಿಸಿ, ವಸತಿ ಶಾಲೆಗಳಿಗೆ ಸೇರಿಸಿಕೊಳ್ಳಲಾಗುತ್ತಿತ್ತು. 165 ವರ್ಷಗಳ ಹಿಂದಿನಿಂದ 1996ರವರೆಗೆ ಹಲವು ಮಕ್ಕಳನ್ನು ಶಾಲೆಗಳಿಗೆ ಸೇರಿಸಿಕೊಳ್ಳಲಾಗಿದೆ. ಇಂಥ ಮಕ್ಕಳ ಮೇಲೆ ದೌರ್ಜನ್ಯ ನಡೆಸುವುದರ ಜೊತೆಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ವರದಿಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.