ADVERTISEMENT

ಪಾಕಿಸ್ತಾನದಲ್ಲಿ ಪ್ರಬಲ ಭೂಕಂಪ

ಪಿಟಿಐ
Published 21 ಮಾರ್ಚ್ 2023, 22:56 IST
Last Updated 21 ಮಾರ್ಚ್ 2023, 22:56 IST
.
.   

ಇಸ್ಲಾಮಾಬಾದ್‌ (ಪಿಟಿಐ): ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದಲ್ಲಿ ಮಂಗಳವಾರ ರಾತ್ರಿ 6.8 ತೀವ್ರತೆಯ ಭೂಕಂಪ ಸಂಭವಿಸಿದೆ, ಜನರು ಭಯಗೊಂಡು ಮನೆಗಳಿಂದ ಓಡಿ ಬಂದರು.

‘ಅಫ್ಗಾನಿಸ್ತಾನದ ಹಿಂದೂ ಖುಷ್‌ ಪ್ರದೇಶ ಭೂಕಂಪನದ ಕೇಂದ್ರಬಿಂದುವಾಗಿದ್ದು, 180 ಕಿ.ಮೀ. ಆಳದಲ್ಲಿ ಕಂಪನ ಸಂಭವಿಸಿತು’ ಎಂದು ಪಾಕಿಸ್ತಾನದ ಹವಾಮಾನ ಇಲಾಖೆ ಹೇಳಿದೆ.

ಲಾಹೋರ್, ಇಸ್ಲಾಮಾಬಾದ್, ಪೆಶಾವರ, ಝೇಲಂ, ಶೇಖುಪುರ, ಸ್ವಾತ್‌, ನವ್‌ಶೇರಾ, ಮುಲ್ತಾನ್, ಶಾಂಗ್ಲಾ ಮತ್ತು ಇತರ ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

‘ಭೂಕಂಪನದಿಂದ ಭಯಗೊಂಡ ಜನರು ತಮ್ಮ ತಮ್ಮ ಮನೆಗಳು ಹಾಗೂ ಕಟ್ಟಡಗಳಿಂದ ಹೊರಬಂದರು. ಇಲ್ಲಿಯವರೆಗೆ ಯಾವುದೇ ನಾಗರಿಕರಿಗೆ ಅಥವಾ ಆಸ್ತಿಗೆ ಹಾನಿಯಾಗಿಲ್ಲ’ ಎಂದು ‘ಡಾನ್‌’ ಪತ್ರಿಕೆ ಹೇಳಿದೆ.

ನವದೆಹಲಿ ವರದಿ: ದೆಹಲಿ ಎನ್‌ಸಿಆರ್‌ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ಮಂಗಳವಾರ ರಾತ್ರಿ ಕಂಪನದ ಅನುಭವವಾಯಿತು.‌

ಜಮ್ಮು ಮತ್ತು ಕಾಶ್ಮೀರ, ಹರಿಯಾಣ, ಪಂಜಾಬ್‌, ರಾಜಸ್ಥಾನಗಳಲ್ಲೂ ಭೂಮಿ ಕಂಪಿಸಿದ್ದು, ಜನರು ತಮ್ಮ ಮನೆಗಳಿಂದ ಹೊರಗೋಡಿ ಬಂದರು. ಭೂಕಂಪನದ ಅನುಭವವಾದ ಕೂಡಲೇ ಜಮ್ಮು ಪ್ರದೇಶದಲ್ಲಿ ಮೊಬೈಲ್‌ ಸೇವೆಯಲ್ಲಿ ವ್ಯತ್ಯಯವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.