ಬೀಜಿಂಗ್: ಲಾಕ್‌ಡೌನ್ ನಿಯಮ ವಿರೋಧಿಸಿ ಪೂರ್ವ ಚೀನಾದ ವಿಶ್ವವಿದ್ಯಾಲಯವೊಂದರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಚೀನಾ ಸರ್ಕಾರವು ಕಠಿಣ ಲಾಕ್‌ಡೌನ್ ನಿಯಮಗಳನ್ನು ಹಿಂಪಡೆದಿದ್ದರ ಹೊರತಾಗಿಯೂ ದೇಶದ ಹಲವೆಡೆ ಈಗಲೂ ಕೋವಿಡ್ ಸಂಬಂಧಿ ನಿರ್ಬಂಧಗಳು ಜಾರಿಯಲ್ಲಿವೆ ಮತ್ತು ಜನರು ಅದನ್ನು ವಿರೋಧಿಸುತ್ತಿದ್ದಾರೆ ಎಂಬುದನ್ನು ಈ ಪ್ರತಿಭಟನೆ ಎತ್ತಿಹಿಡಿದಿದೆ.
ನಂಜಿಂಗ್ ಟೆಕ್ ವಿಶ್ವವಿದ್ಯಾಲಯದಲ್ಲಿ ಒಂದು ಕೋವಿಡ್ ಪ್ರಕರಣ ಪತ್ತೆಯಾದ ಕಾರಣ ವಿ.ವಿ ಕ್ಯಾಂಪಸ್ಅನ್ನು ಐದು ದಿನಗಳ ಕಾಲ ಸೀಲ್‌ಡೌನ್ ಮಾಡಲು ಆಡಳಿತ ಮಂಡಳಿ ನಿರ್ಧರಿಸಿದೆ. ಇದನ್ನು ವಿರೋಧಿಸಿ ಅಲ್ಲಿಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಚೀನಾದ ವಿ.ವಿಗಳು ತಿಂಗಳುಗಳ ಕಾಲ ಕೋವಿಡ್ ನಿರ್ಬಂಧವನ್ನು ಜಾರಿಗೊಳಿಸಿವೆ. ಕ್ಯಾಂಪಸ್‌ನಿಂದ ಹೊರ ಹೋಗಲು ಅನುಮತಿ ಪಡೆಯುವಂತೆ ಕೆಲ ವಿ.ವಿಗಳುವಿದ್ಯಾರ್ಥಿಗಳಿಗೆ ಆದೇಶಿಸಿವೆ. ಇದು ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಕಳೆದ ವಾರ ಚೀನಾದಾದ್ಯಂತ ನಡೆದ ಲಾಕ್‌ಡೌನ್ ವಿರೋಧಿ ಹೋರಾಟದ ಬಳಿಕ ಹಲವಾರು ನಗರಗಳು ಸಾಮೂಹಿಕ ಕೋವಿಡ್ ಪರೀಕ್ಷೆ ಮತ್ತು ಸಂಚಾರ ನಿಷೇಧವನ್ನು ತಾತ್ಕಾಲಿಕವಾಗಿ ಹಿಂಪಡೆಯಲು ಆರಂಭಿಸಿವೆ. ಆದರೆ ಸುಮಾರು 53 ನಗರಗಳು ಈಗಲೂ ನಿರ್ಬಂಧವನ್ನು ಮುಂದುವರೆಸಿವೆ ಎಂದು ಜಪಾನ್‌ನ ನೊಮುರ ಎಂಬ ಸಂಸ್ಥೆಯ ವಿಶ್ಲೇಷಕರು ಸೋಮವಾರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.