ನವದೆಹಲಿ: ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಜನರನ್ನು ಕರೆದೊಯ್ಯಲು ಬಳಸಲಾಗುವ ಜಲಾಂತರ್ಗಾಮಿ ಅಟ್ಲಾಂಟಿಕ್ ಸಾಗರದಲ್ಲಿ ಸೋಮವಾರ ನಾಪತ್ತೆಯಾಗಿದೆ.
ಅಮೆರಿಕದ ಕರಾವಳಿ ಕಾವಲು ಪಡೆಯ ಮಾಹಿತಿ ಉಲ್ಲೇಖಿಸಿ ಅಂತರರಾಷ್ಟ್ರೀಯ ಸುದ್ದಿ ಮಾಧ್ಯಮಗಳು ಈ ಬಗ್ಗೆ ವರದಿ ಪ್ರಕಟಿಸಿವೆ.
ನಾಪತ್ತೆಯಾಗಿರುವ ಸಬ್ಮರಿನ್ ಪತ್ತೆ ಹಚ್ಚಲು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಜಲಾಂತರ್ಗಾಮಿಯಲ್ಲಿ ಎಷ್ಟು ಜನರಿದ್ದರು ಎಂಬುದರ ಬಗ್ಗೆ ಪ್ರಸ್ತುತ ಮಾಹಿತಿ ಲಭ್ಯವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.