ಕೈರೋ: ಈಜಿಪ್ಟ್‌ನ ಸುಯೆಜ್ ಕಾಲುವೆಯಲ್ಲಿ ಸಿಲುಕಿರುವ ಹಡಗನ್ನು ತೆರವುಗೊಳಿಸುವ ಕಾರ್ಯಾಚರಣೆ ಇನ್ನೂ ನಡೆಯುತ್ತಿದ್ದು, ಇದರಿಂದ ಸಮುದ್ರದಲ್ಲಿ ಹಲವು ಹಡಗುಗಳು ಸಾಲುಗಟ್ಟಿ ನಿಲ್ಲಬೇಕಾಗಿದೆ.
ಹೀಗಾಗಿ ಕಾಲುವೆ ಮುಖಾಂತರ ಸಾಗಬೇಕಿದ್ದ ಹಡಗುಗಳಿಗೆ ನಷ್ಟ ಉಂಟಾಗಿದ್ದು, ಅದಕ್ಕಾಗಿ ಡಿಸ್ಕೌಂಟ್ ನೀಡುವ ಕುರಿತು ಸುಯೆಜ್ ಕಾಲುವೆ ಪ್ರಾಧಿಕಾರ ಮುಂದಾಗಿದೆ.
ಪ್ರಾಧಿಕಾರ ಅಧ್ಯಕ್ಷರ ಒಸಾಮ ರಬೀ ಭಾನುವಾರ ಈ ಕುರಿತು ಹೇಳಿಕೆ ನೀಡಿದ್ದು, ಸುಯೆಜ್ ಕಾಲುವೆ ಬಂದ್ ಆಗಿರುವುದರಿಂದ ದಿನಕ್ಕೆ $13-14 ಮಿಲಿಯನ್ ನಷ್ಟವಾಗುತ್ತಿದೆ. 369 ಹಡಗುಗಳು ಕಾಲುವೆ ಮೂಲಕ ಸಾಗಲು ಸರದಿಯಲ್ಲಿ ಕಾಯುತ್ತಿವೆ ಎಂದು ಹೇಳಿದ್ದಾರೆ.
ಕಾಲುವೆಯಲ್ಲಿ ಸಿಲುಕಿಕೊಂಡಿರುವ ಹಡಗನ್ನು ಹೊರತರಲು ಕಳೆದ ಐದು ದಿನಗಳಿಂದ ಶ್ರಮಿಸಲಾಗುತ್ತಿದೆ. ಎವರ್ ಗಿವನ್ ಹೆಸರಿನ ಜಪಾನ್ ಮೂಲದ ಬೃಹತ್ ಕಂಟೇನರ್ ಸರಕು ಸಾಗಣಿಕೆ ಹಡಗು ಕಾಲುವೆಯಲ್ಲಿ ಸಿಲುಕಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.