ಜಕಾರ್ತಾ: ‘ಇಂಡೋನೇಷ್ಯಾದ ಸುಲಾವೆಸಿ ದ್ವೀಪದ ರೋಮನ್ ಕ್ಯಾಥೊಲಿಕ್ ಚರ್ಚ್‌ನಲ್ಲಿ ಗರಿಗಳ ಭಾನುವಾರ (ಪಾಮ್ ಸಂಡೆ) ಆಚರಣೆಯಲ್ಲಿ ನೂರಾರು ಜನ ಭಾಗಿಯಾಗಿದ್ದಾಗಲೇ ಆತ್ಮಾಹುತಿ ಬಾಂಬ್ ಸ್ಫೋಟಿಸಿದ್ದು, ಕನಿಷ್ಠ 9 ಮಂದಿಗೆ ಗಾಯವಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಸುಲಾವೆಸಿ ಪ್ರಾಂತ್ಯದ ರಾಜಧಾನಿ ಮಕಸ್ಸರ್‌ನಲ್ಲಿರುವ ಸೇಕ್ರೆಡ್ ಹಾರ್ಟ್ ಆಫ್ ಜೇಸಸ್ ಕೆಥಡ್ರಲ್‌ನ ಹೊರಭಾಗದಲ್ಲಿ ಮೋಟರ್ ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡ ಎಂದು ಪೊಲೀಸರು ಮಾಹಿತಿ ನೀಡಿದರು.
‘ಬೈಕ್‌ನಲ್ಲಿ ಇಬ್ಬರು ಶಂಕಿತರು ಬಂದಿರಬೇಕು. ಚರ್ಚ್ ಒಳಗೆ ನುಗ್ಗುವುದು ಅವರ ಗುರಿಯಾಗಿರಬೇಕು. ಆದರೆ ದ್ವಾರದ ಬಳಿಯಲ್ಲೇ ಒಬ್ಬ ಬಾಂಬ್ ಸ್ಫೋಟಿಸಿದ. ಹೀಗಾಗಿ ನಾಲ್ವರು ಭದ್ರತಾ ಸಿಬ್ಬಂದಿ ಮತ್ತು ಐವರು ಚರ್ಚ್‌ಗೆ ತೆರಳುತ್ತಿದ್ದ ಮಂದಿ ಗಾಯಗೊಂಡರು‘ ಎಂದು ಚರ್ಚ್‌ನ ಭದ್ರತಾ ಸಿಬ್ಬಂದಿಯೊಬ್ಬರು ಹೇಳಿದರು.
2002ರಲ್ಲಿ ಬಾಲಿಯಲ್ಲಿ ಬಾಂಬ್ ಸ್ಫೋಟಿಸಿ 202 ಮಂದಿ ಮೃತಪಟ್ಟಿದ್ದರು. ಬಳಿಕ ಇಂಡೋನೇಷ್ಯಾದಲ್ಲಿ ಆಗಾಗ ಸಣ್ಣ ಪ್ರಮಾಣದ ಬಾಂಬ್ ದಾಳಿಗಳು ನಡೆಯುತ್ತಲೇ ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.