ADVERTISEMENT

ಪರಸ್ಪರ ಸಹಕಾರ: ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ‍ಪುನರುಚ್ಚಾರ

ಪಿಟಿಐ
Published 28 ಜನವರಿ 2021, 5:51 IST
Last Updated 28 ಜನವರಿ 2021, 5:51 IST
ಜೇಕ್ ಸುಲಿವನ್
ಜೇಕ್ ಸುಲಿವನ್   

ವಾಷಿಂಗ್ಟನ್: ಅಮೆರಿಕದ ನೂತನ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲಿವನ್‌ ಅವರು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್‌ ಜೊತೆಗೆ ದೂರವಾಣಿ ಮೂಲಕ ಚರ್ಚಿಸಿದ್ದು, ಪ್ರಜಾಪ್ರಭುತ್ವಕ್ಕೆ ಬದ್ಧವಾಗಿ ಉಭಯ ರಾಷ್ಟ್ರಗಳ ಮಧ್ಯೆ ಪರಸ್ಪರ ಸಹಕಾರ ಕುರಿತ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.

‘ಭಾರತ ಮತ್ತು ಅಮೆರಿಕ ನಡುವೆ ದೃಢ ಸಹಕಾರ ಕುರಿತು ಅಧ್ಯಕ್ಷ ಜೋ ಬೈಡನ್ ಅವರ ಬದ್ಧತೆಯನ್ನು ಸುಲಿವಾನ್‌ ದೃಢಪಡಿಸಿದ್ದಾರೆ‘ ಎಂದು ಶ್ವೇತಭವನದಲ್ಲಿನ ರಾಷ್ಟ್ರೀಯ ಭದ್ರತಾ ಮಂಡಳಿ ಹೇಳಿಕೆ ನೀಡಿದೆ.

ಉಭಯ ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ನಡುವೆ ಇದು ಪ್ರಥಮ ದೂರವಾಣಿ ಚರ್ಚೆ. ಇಂಡೊ –ಪೆಸಿಫಿಕ್‌ ವಲಯದಲ್ಲಿ ಸಹಕಾರ, ಪ್ರಾದೇಶಿಕ ಭದ್ರತೆಗೆ ಒತ್ತು ನೀಡುವುದು, ಜಾಗತಿಕ ಸವಾಲುಗಳನ್ನು ಎದುರಿಸಲು ಸಹಕಾರ, ಕೋವಿಡ್–19 ಪರಿಸ್ಥಿತಿ ಎದುರಿಸುವ ಕುರಿತು ಚರ್ಚೆ ನಡೆಯಿತು ಎಂದು ತಿಳಿಸಿದೆ.

ADVERTISEMENT

ಜೋ ಬೈಡನ್ ಅವರ ಆಪ್ತರಲ್ಲಿ ಒಬ್ಬರಾಗಿರುವ ಸುಲಿವನ್ ಅವರು, ಇದುವರೆಗೂ ಎಂಟು ವಿವಿಧ ದೇಶಗಳ ಭದ್ರತಾ ಸಲಹೆಗಾರರ ಜೊತೆಗೆ ಚರ್ಚೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.