ವಾಷಿಂಗ್ಟನ್: ಟಾಟಾ ಸನ್ಸ್‌ನ ಭಾರತದ ಕಾರ್ಪೊರೇಟ್ ವಲಯದ ನಾಯಕ ಸೂರ್ಯ ಕಾಂತ್ ಅವರು ಯುಎಸ್ ಇಂಡಿಯಾ ಸ್ಟ್ರಾಟೆಜಿಕ್ ಅಂಡ್ ಪಾರ್ಟ್‌ನರ್‌ಶಿಪ್ ಫೋರಂ (ಯುಎಸ್‌ಐಎಸ್‌ಪಿಎಫ್) ನಿರ್ದೇಶಕರ ಮಂಡಳಿಯನ್ನು ಸೇರಿಕೊಂಡಿದ್ದಾರೆ.
‘ಸೂರ್ಯ ಅವರ ನಾಯಕತ್ವವು ಕಾರ್ಯತಂತ್ರ ಪಾಲುದಾರಿಕೆಯ ಸ್ವರೂಪ ನಿರ್ಧರಿಸುವಲ್ಲಿ ಹಾಗೂ ಮಾರ್ಗದರ್ಶನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ವಾಷಿಂಗ್ಟನ್ ಮತ್ತು ನವದೆಹಲಿ ನಡುವೆ ಸಶಕ್ತ ಪಾಲುದಾರಿಕೆ ಬೆಳೆಸುವಲ್ಲಿ ತಂತ್ರಜ್ಞಾನ, ಸ್ಟಾರ್ಟ್‌ಅಪ್‌ಗಳು ಮತ್ತು ವಿಜ್ಞಾನ–ತಂತ್ರಜ್ಞಾನ ಸಂಬಂಧಿತ (ಎಸ್‌ಟಿಇಎಂ) ಶಿಕ್ಷಣದಲ್ಲಿ ಆಗುತ್ತಿರುವ ಬದಲಾವಣೆಯನ್ನು ಸೂರ್ಯ ಅರ್ಥಮಾಡಿಕೊಂಡಿದ್ದಾರೆ’ ಎಂದು ಯುಎಸ್‌ಐಎಸ್‌ಪಿಎಫ್‌ನ ಅಧ್ಯಕ್ಷ ಮತ್ತು ಸಿಎಒ ಮುಖೇಶ್ ಅಘಿ ಹೇಳಿದ್ದಾರೆ.
‘ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವು ವೃದ್ಧಿಸಿದೆ. ದ್ವಿಪಕ್ಷೀಯ ಸಂಬಂಧ ವರ್ಧನೆಯಲ್ಲಿ ಯುಎಸ್‌ಐಎಸ್‌ಪಿಎಫ್‌ನ ಪ್ರಯತ್ನಗಳು ನಿರ್ಣಾಯಕವಾಗಿವೆ. ಇದೇ ನಿಟ್ಟಿನಲ್ಲಿ ಮಂಡಳಿಯ ಇತರ ಸದಸ್ಯರೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ’ ಎಂದು ಸೂರ್ಯ ಕಾಂತ್ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.