ಎಪಿ
ದುಬೈ: ಕೆಂಪು ಸಮುದ್ರದ ಮೂಲಕ ಸಾಗುತ್ತಿದ್ದ ಹಡುಗಿನ ಸಮೀಪದಲ್ಲಿ ಮಂಗಳವಾರ ಸರಣಿ ಸ್ಫೋಟಗಳು ಸಂಭವಿಸಿದ್ದು, ಇದು ಯೆಮನ್‌ನ ಹೂಥಿ ಬಂಡುಕೋರರ ಕೃತ್ಯ ಎಂದು ಶಂಕಿಸಲಾಗಿದೆ. ಘಟನೆಯಲ್ಲಿ ಯಾವುದೇ ಹಾನಿಯಾಗಿರುವ ಬಗ್ಗೆ ತಕ್ಷಣಕ್ಕೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೂಥಿ ಬಂಡುಕೋರರು ಸದ್ಯಕ್ಕೆ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ.
ಹಡಗಿನಲ್ಲಿದ್ದ ಯಾರಿಗೂ ಯಾವುದೇ ಹಾನಿಯಾಗಿಲ್ಲ. ಹಡಗು ತನ್ನ ಪ್ರಯಾಣವನ್ನು ಮುಂದುವರಿಸಿದೆ ಎಂದು ಬ್ರಿಟನ್‌ನ ಕರಾವಳಿ ವ್ಯಾಪಾರ ಕಾರ್ಯಾಚರಣೆ ಕೇಂದ್ರ ತಿಳಿಸಿದೆ.
ಈ ಮಧ್ಯೆ ಇಸ್ರೇಲ್–ಹಮಾಸ್ ಯುದ್ಧ ಮುಂದುವರಿದಂತೆಲ್ಲಾ ದಾಳಿ ಮುಂದುವರಿಯುತ್ತದೆ ಎಂದು ಹೂಥಿ ಬಂಡುಕೋರರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.