ADVERTISEMENT

ಸಿರಿಯಾ ಮೇಲೆ ಇಸ್ರೇಲ್ ದಾಳಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2024, 11:25 IST
Last Updated 7 ಫೆಬ್ರುವರಿ 2024, 11:25 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಡಮಾಸ್ಕಸ್: ಸಿರಿಯಾದ ಹೊಮ್ಸ್‌ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಇಸ್ರೇಲ್‌ ಮಂಗಳವಾರ ವಾಯುದಾಳಿ ನಡೆಸಿದ್ದು ಹಲವು ನಾಗರಿಕರು ಮೃತಪಟ್ಟಿದ್ದಾರೆ ಎಂದು ಸಿರಿಯಾ ಮಿಲಿಟರಿ ಬುಧವಾರ ತಿಳಿಸಿದೆ. ದಾಳಿಯಲ್ಲಿ ಹಲವರಿಗೆ ಗಾಯಗಳಾಗಿವೆ. ಈ ವಿಚಾರವಾಗಿ ಇಸ್ರೇಲ್ ಕಡೆಯಿಂದ ಪ್ರತಿಕ್ರಿಯೆ ಬಂದಿಲ್ಲ.

ದಾಳಿ ನಡೆದಿರುವ ಬಗ್ಗೆ ಸಿರಿಯಾ ಮಿಲಿಟರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ಅಲ್ಲಿನ ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಸನಾ ವರದಿ ಮಾಡಿದೆ. ಲೆಬನಾನ್‌ನ ಕರಾವಳಿ ಪಟ್ಟಣ ಟ್ರಿಪೊಲಿಗೆ ಹೊಂದಿಕೊಂಡಿರುವ ಮೆಡಿಟರೇನಿಯನ್ ಸಮುದ್ರದ ಕಡೆಯಿಂದ ಇಸ್ರೇಲ್ ದಾಳಿ ನಡೆಸಿದೆ.

ADVERTISEMENT

ಕನಿಷ್ಠ ಆರು ಮಂದಿ ನಾಗರಿಕರು ದಾಳಿಯಲ್ಲಿ ಬಲಿಯಾಗಿದ್ದಾರೆ ಎಂದು ಬ್ರಿಟನ್ನಿನಲ್ಲಿ ಇರುವ ಮಾನವ ಹಕ್ಕು ಸಂಘಟನೆಯೊಂದು ಹೇಳಿದೆ. ಲೆಬನಾನ್‌ನ ಹಿಜ್ಬುಲ್ಲಾ ಬಂಡುಕೋರ ಸಂಘಟನೆಯ ಇಬ್ಬರು ಈ ದಾಳಿಗೆ ಬಲಿಯಾಗಿದ್ದಾರೆ. ಸಿರಿಯಾ ಸರ್ಕಾರದ ನಿಯಂತ್ರಣದಲ್ಲಿ ಇರುವ ಪ್ರದೇಶಗಳ ಮೇಲೆ ಇಸ್ರೇಲ್‌ ಈಚಿನ ವರ್ಷಗಳಲ್ಲಿ ನೂರಾರು ಬಾರಿ ದಾಳಿ ನಡೆಸಿದೆ.

ಸಿರಿಯಾ ಮೇಲೆ ನಡೆಸುವ ದಾಳಿಗಳನ್ನು ಇಸ್ರೇಲ್ ಒಪ್ಪಿಕೊಳ್ಳುವುದು ಬಹಳ ಕಡಿಮೆ. ಆದರೆ, ಇರಾನ್ ಜೊತೆ ನಂಟು ಹೊಂದಿರುವ ಬಂಡುಕೋರರ ನೆಲೆಗಳನ್ನು ತಾನು ಗುರಿಯಾಗಿಸಿಕೊಳ್ಳುವುದಾಗಿ ಅದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.