ADVERTISEMENT

ಅಮೆರಿಕದ ಟೆಕ್ಸಾಸ್‌ನಲ್ಲಿ ಟ್ಯಾಗೋರ್ ಸ್ಮಾರಕ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2023, 16:05 IST
Last Updated 27 ಫೆಬ್ರುವರಿ 2023, 16:05 IST
ಅಮೆರಿಕದ ಹ್ಯೂಸ್ಟನ್‌ನಲ್ಲಿ ಸಾಹಿತಿ ರವೀಂದ್ರನಾಥ ಟ್ಯಾಗೋರ್‌ ಅವರ ಸ್ಮಾರಕ ಟ್ಯಾಗೋರ್‌ ಗ್ರೋವ್‌ ಮೆಮೋರಿಯಲ್‌ ಅನ್ನು ಈಚೆಗೆ ಉದ್ಘಾಟಿಸಲಾಯಿತು    –ಪಿಟಿಐ ಚಿತ್ರ 
ಅಮೆರಿಕದ ಹ್ಯೂಸ್ಟನ್‌ನಲ್ಲಿ ಸಾಹಿತಿ ರವೀಂದ್ರನಾಥ ಟ್ಯಾಗೋರ್‌ ಅವರ ಸ್ಮಾರಕ ಟ್ಯಾಗೋರ್‌ ಗ್ರೋವ್‌ ಮೆಮೋರಿಯಲ್‌ ಅನ್ನು ಈಚೆಗೆ ಉದ್ಘಾಟಿಸಲಾಯಿತು    –ಪಿಟಿಐ ಚಿತ್ರ    

ಹ್ಯೂಸ್ಟನ್‌ (ಪಿಟಿಐ): ನೊಬೆಲ್‌ ಪುರಸ್ಕೃತ ಸಾಹಿತಿ ರವೀಂದ್ರನಾಥ ಟ್ಯಾಗೋರರ ಸ್ಮರಣಾರ್ಥವಾಗಿ ಅಮೆರಿಕದ ಟೆಕ್ಸಾಸ್‌ನಲ್ಲಿ ನಿರ್ಮಿಸಲಾಗಿರುವ ಟ್ಯಾಗೋರ್‌ ಮೆಮೋರಿಯಲ್‌ ಗ್ರೋವ್‌ (ಟ್ಯಾಗೋರ್‌ ವನ) ಮತ್ತು ವಸ್ತು ಸಂಗ್ರಹಾಲಯವನ್ನು ಈಚೆಗೆ ಉದ್ಘಾಟಿಸಲಾಯಿತು.

ಇದು ಅಮೆರಿಕದಲ್ಲಿ ನಿರ್ಮಿಸಲಾಗಿರುವ ಟ್ಯಾಗೋರರ ಪ್ರಥಮ ಸ್ಮಾರಕ.

ಟ್ಯಾಗೋರರ ಚಿಂತನೆ, ಸಂದೇಶಗಳನ್ನು ಸಾರುವ ಹೊರಾಂಗಣ ಸ್ಮಾರಕ ಇದಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ಹ್ಯೂಸ್ಟನ್‌ನ ಭಾರತದ ಕಾನ್ಸುಲ್‌ ಜನರಲ್‌ ಅಸೀಮ್‌ ಮಹಾಜನ್‌, ಫೋರ್ಟ್‌ ಬೆಂಡ್‌ ಕೌಂಟಿ ನ್ಯಾಯಾಧೀಶ ಕೆ.ಪಿ. ಜಾರ್ಜ್‌, ಫೋರ್ಟ್‌ ಬೆಂಡ್‌ ಆಯುಕ್ತ ಆ್ಯಂಡಿ ಮೈಯೆರ್ಸ್‌, ಕೆಲ ಅಧಿಕಾರಿಗಳು ಮತ್ತು ಭಾರತೀಯ ಸಮುದಾಯದ ಹಲವರು ಉಪಸ್ಥಿತರಿದ್ದರು.

ADVERTISEMENT

ಉದ್ಘಾಟನೆ ವೇಳೆ ಭಾರತೀಯ ಸಮುದಾಯದ ಸದಸ್ಯರು ಟ್ಯಾಗೋರ್‌ ಅವರ ಸಂಗೀತ ಸಂಯೋಜನೆಗಳನ್ನು ಹಾಡಿದರು ಮತ್ತು ವೇದ ಘೋಷಗಳನ್ನು ಪಠಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.