ಕಾಬೂಲ್: ಅಫ್ಗಾನಿಸ್ತಾನದಲ್ಲಿ ಹೊಸ ಸರ್ಕಾರ ರಚಿಸುವ ಸಂಬಂಧ ತಮ್ಮ ಸಂಘಟನೆಯ ಸಹಸದಸ್ಯರು ಮತ್ತು ಇತರೆ ರಾಜಕೀಯ ನಾಯಕರೊಂದಿಗೆ ಚರ್ಚಿಸಲು ತಾಲಿಬಾನಿ ಸಂಘಟನೆಯ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದರ್ ಶನಿವಾರ ಕಾಬೂಲ್‌ಗೆ ಬಂದಿಳಿದಿದ್ದಾನೆ.
‘ಸದ್ಯ ಕಾಬೂಲ್‌ಗೆ ಭೇಟಿ ನೀಡಿರುವ ಅಬ್ದುಲ್ ಅವರು ಹೊಸ ಸರ್ಕಾರ ರಚನೆ ಸಂಬಂಧ ಜಿಹಾದಿ ನಾಯಕರು ಮತ್ತು ರಾಜಕಾರಣಿಗಳನ್ನು ಭೇಟಿ ಮಾಡಲಿದ್ದಾನೆ‘ ಎಂದು ಹಿರಿಯ ತಾಲಿಬಾನ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದರು.
2010ರಲ್ಲಿ ಅಬ್ದುಲ್‌ನನ್ನು ಪಾಕಿಸ್ತಾನದ ಕರಾಚಿಯಲ್ಲಿ ಅಮೆರಿಕದ ಗುಪ್ತಚರ ಸಂಸ್ಥೆ ಬಂಧಿಸಿತ್ತು. 2018ರಲ್ಲಿ ಬಿಡುಗಡೆ ಮಾಡಲಾಗಿತ್ತು. ನಂತರ ಈತನನ್ನು ದೋಹಾದಲ್ಲಿರುವ ತಾಲಿಬಾನ್‌ನ ರಾಜಕೀಯ ಕಚೇರಿಯ ಮುಖ್ಯಸ್ಥನನ್ನಾಗಿ ನೇಮಿಸಲಾಯಿತು.
ಕತಾರ್‌ನಲ್ಲಿ ನೆಲೆಸಿದ್ದ ಈತ, ಕಳೆದ ಮಂಗಳವಾರ ತಾಲಿಬಾನ್‌ನ ಮೂಲ ನಗರವಾದ ಕಂದಹಾರ್‌ಗೆ ಹಿಂತಿರುಗಿದ್ದಾನೆ. ಇವರು ಅಮೆರಿಕ ಸರ್ಕಾರದ ಜತೆಗೆ ನಡೆದ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.