ADVERTISEMENT

ಕಂದಹಾರ್‌ನ ಟಿವಿ, ರೇಡಿಯೊದಲ್ಲಿ ಹೆಣ್ಣಿನ ದನಿ, ಸಂಗೀತಕ್ಕೆ ತಾಲಿಬಾನ್ ನಿರ್ಬಂಧ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಆಗಸ್ಟ್ 2021, 12:18 IST
Last Updated 29 ಆಗಸ್ಟ್ 2021, 12:18 IST
ಅಫ್ಗಾನಿಸ್ತಾನದಲ್ಲಿ ಮಹಿಳೆಯರ ಹೋರಾಟ–ಸಾಂದರ್ಭಿಕ ಚಿತ್ರ
ಅಫ್ಗಾನಿಸ್ತಾನದಲ್ಲಿ ಮಹಿಳೆಯರ ಹೋರಾಟ–ಸಾಂದರ್ಭಿಕ ಚಿತ್ರ   

ನವದೆಹಲಿ: ಅಫ್ಗಾನಿಸ್ತಾನದಲ್ಲಿ ಆಡಳಿತದ ಮೇಲೆ ಹಿಡಿತ ಸಾಧಿಸಿರುವ ತಾಲಿಬಾನಿಗಳು ಮಹಿಳೆಯರ ದನಿಯನ್ನು ಅಡಗಿಸಲು ಮುಂದಾಗಿದ್ದಾರೆ. ಕಂದಹಾರ್‌ನ ಟಿವಿ ಮತ್ತು ರೇಡಿಯೊ ಚಾನೆಲ್‌ಗಳಲ್ಲಿ ನಿರೂಪಕಿಯರ ಮೇಲೆ ನಿರ್ಬಂಧ ಹೇರಲಾಗಿದೆ ಹಾಗೂ ಸಂಗೀತವನ್ನು ನಿಷೇಧಿಸಿದ್ದಾರೆ.

ಆಗಸ್ಟ್‌ 15ರಂದು ತಾಲಿಬಾನ್‌ ಅಫ್ಗಾನಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ನಂತರದಲ್ಲಿ ಅಲ್ಲಿನ ಕೆಲವು ಮಾಧ್ಯಮಗಳು ನಿರೂಪಕಿಯರನ್ನು ಕೆಲಸದಿಂದ ತೆಗೆದು ಹಾಕಿದ್ದವು. ಮಹಿಳಾ ಸಿಬ್ಬಂದಿಯನ್ನು ಕೆಲಸ ಬಿಡುವಂತೆ ಸೂಚಿಸಿರುವುದಾಗಿ ಕಾಬೂಲ್‌ನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು. ಈ ಕುರಿತು ಇಂಡಿಯಾ ಟುಡೇ ವರದಿ ಮಾಡಿದೆ.

ಮಹಿಳೆಯರಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುತ್ತದೆ ಹಾಗೂ ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ ಅವರಿಗೆ ಅಧ್ಯಯನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ತಾನಿಬಾನಿಗಳು ಭರವಸೆ ನೀಡಿದ್ದರು. ಆದರೆ, ಈಗ ಸಂಗೀತ, ಮಾಧ್ಯಮಗಳಲ್ಲಿ ಮಹಿಳೆಯ ದನಿಯನ್ನೂ ಕೇಳಿಸದಂತೆ ಮಾಡುತ್ತಿರುವುದು ವರದಿಯಾಗಿವೆ.

ADVERTISEMENT

ತಾಲಿಬಾನಿಗಳ ಭರವಸೆಯ ನಡುವೆಯೂ ಮಹಿಳೆಯರು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಮಹಿಳೆಯರು ಮನೆಯಿಂದ ಹೊರಬರುವಾಗ ಕುಟುಂಬದ ಪುರುಷ ಸದಸ್ಯರು ಜೊತೆಗಿರಬೇಕು ಹಾಗೂ ಮಹಿಳೆಯು ಮುಡಿಯನ್ನು ಮುಚ್ಚಿಕೊಳ್ಳಬೇಕು ಎಂಬ ನಿಯಮಗಳನ್ನು ಈ ಹಿಂದೆ ತಾಲಿಬಾನಿಗಳು ಹೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.