ADVERTISEMENT

ಅಫ್ಗಾನಿಸ್ತಾನದಲ್ಲಿ ‘ಅಲ್‌–ಖೈದಾ‘ ಮತ್ತೆ ಮರುಕಳಿಸುವ ಭೀತಿ

ಏಜೆನ್ಸೀಸ್
Published 24 ಆಗಸ್ಟ್ 2021, 7:05 IST
Last Updated 24 ಆಗಸ್ಟ್ 2021, 7:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ಅಮೆರಿಕ, ತನ್ನ ನೆಲದಲ್ಲಿ ನಡೆಯುತ್ತಿರುವ ಉಗ್ರವಾದವನ್ನು ಹತ್ತಿಕ್ಕಲು ಹಾಗೂ ರಷ್ಯಾ ಮತ್ತು ಚೀನಾದ ಸೈಬರ್ ದಾಳಿ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿರುವ ನಡುವೆಯೇ ಅಫ್ಗಾನಿಸ್ತಾನದಲ್ಲಿ ನಡೆಯುತ್ತಿರುವ ಮಿಂಚಿನ ವೇಗದ ಬೆಳವಣಿಗೆಗಳು ಅಲ್‌ ಖೈದಾ ಭಯೋತ್ಪಾದಕ ಸಂಘಟನೆಯು ಮತ್ತೆಮರುಕಳಿಸುವ ಭೀತಿಯನ್ನು ಸೃಷ್ಟಿಸುತ್ತಿದೆ ಎಂದು ಡೊನಾಲ್ಡ್‌ ಟ್ರಂಪ್ ಆಡಳಿತದಲ್ಲಿ ಭಯೋತ್ಪಾದಕ ನಿಗ್ರಹದಳದ ಹಿರಿಯ ನಿರ್ದೇಶಕರಾಗಿದ್ದ ಕ್ರಿಸ್‌ ಕೋಸ್ಟಾ ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕ ತನ್ನ ಸೇನೆಯನ್ನು ತ್ವರಿತಗತಿಯಲ್ಲಿ ಹಿಂತೆಗೆದುಕೊಳ್ಳುತ್ತಿದ್ದಂತೆ ಅಫ್ಗಾನಿಸ್ಥಾನದಲ್ಲಿ ತಾಲಿಬಾನ್‌ ಶಕ್ತಿ ಹೆಚ್ಚಾದ ಮೇಲೆ, ಅಲ್‌–ಖೈದಾ ಭಯೋತ್ಪಾದಕ ಸಂಘಟನೆ ತಲೆಯೆತ್ತುವ ಅವಕಾಶ ಸಿಕ್ಕಂತಾಗಿದೆ ಎಂದು ನಾನು ಅಂದಾಜಿಸಿದ್ದೇನೆ. ಮಾತ್ರವಲ್ಲ, ಈ ಎಲ್ಲ ಬೆಳವಣಿಗೆಗಳ ಅವಕಾಶವನ್ನು ಆ ಸಂಘಟನೆ ಬಳಸಿಕೊಳ್ಳಲಿದೆ‘ ಎಂದು ಅವರು ಹೇಳಿದ್ದಾರೆ.

‘ಈ ವಿದ್ಯಮಾನ, ವಿಶ್ವದೆಲ್ಲೆಡೆ ಇರುವ ಜಿಹಾದಿಗಳಿಗೆ ಒಂದು ರೀತಿ ಮಿಂಚಿನ ಬೆಳವಣಿಗೆಯಾಗಿದೆ‘ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.