ಕಾಬೂಲ್ : ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವು ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನವೊಂದರಲ್ಲಿ ಭಾಗವಹಿಸಲಿದೆ.
ಅಜರ್‌ಬೈಜಾನ್‌ನಲ್ಲಿ ಸೋಮವಾರ ಆರಂಭವಾಗಲಿರುವ ‘ಸಿಒಪಿ29’ ಹವಾಮಾನ ಸಮ್ಮೇಳನದಲ್ಲಿ ಭಾಗಿಯಾಗಲು ತಾಲಿಬಾನ್ ಸರ್ಕಾರದ ನಿಯೋಗವು ಈಗಾಗಲೇ ಬಾಕುಗೆ ತೆರಳಿದೆ ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಸಂಸ್ಥೆಯು ಭಾನುವಾರ ತಿಳಿಸಿದೆ.
‘ಅಫ್ಘಾನಿಸ್ತಾನವು ಹವಾಮಾನ ಬದಲವಾಣೆಯಿಂದ ಉಂಟಾಗಿರುವ ಪರಿಣಾಮದಿಂದ ಬಳಲುತ್ತಿದೆ. ಈ ರೀತಿಯ ಸಮಸ್ಯೆಗಳನ್ನು ಬಗೆಹರಿಸಲು ಅಂತರರಾಷ್ಟ್ರೀಯ ನೆರವು ಮತ್ತು ಆರ್ಥಿಕ ಸಹಾಯವನ್ನು ಪಡೆಯಲು ಹವಾಮಾನ ಸಮ್ಮೇಳನವು ಸಹಾಯಕವಾಗಲಿದೆ’ ಎಂದು ಕಾಬೂಲ್ ವಿಶ್ವವಿದ್ಯಾಲಯದ ಪ್ರೊಫೆಸರ್ ಆಬಿದ್ ಅರಬ್ಬೈ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.