ದಾರ್ ಎಸ್ ಸಲಾಮ್ (ತಾಂಜಾನಿಯಾ): ತಾಂಜಾನಿಯಾ ದಲ್ಲಿ 43 ಪ್ರಯಾಣಿಕರನ್ನು ಹೊತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವೊಂದು ಲ್ಯಾಂಡಿಂಗ್ ವೇಳೆ ತಾಂತ್ರಿಕ ದೋಷ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಬುಕೋಬ ನಗರದ ವಿಕ್ಟೋರಿಯಾ ಸರೋವರದಲ್ಲಿ ಭಾನುವಾರ ಬಿದ್ದಿದ್ದು, 19 ಮಂದಿ ಮೃತಪಟ್ಟಿದ್ದಾರೆ.
ದಾರ್ ಎಸ್ ಸಲಾಮ್‌ನಿಂದ ಬುಕೋಬ ನಗರಕ್ಕೆ ಹೊರಟಿದ್ದ ವಿಮಾನವು ‘ಪ್ರೆಸೆಷನ್ ಏರ್‌ಲೈನ್ಸ್’ ಕಂಪನಿಗೆ ಸೇರಿದ್ದಾಗಿದ್ದು, ಬುಕೋಬ ವಿಮಾನ ನಿಲ್ದಾಣದಿಂದ ಕೇವಲ 100 ಮೀಟರ್ ದೂರದಲ್ಲಿರುವ ವಿಕ್ಟೋರಿಯಾ ಸರೋವರದಲ್ಲಿ ಬಿದ್ದಿದೆ.
39 ಪ್ರಯಾಣಿಕರು, ಇಬ್ಬರು ಪೈಲಟ್‌ಗಳು ಹಾಗೂ ಇಬ್ಬರು ಸಿಬ್ಬಂದಿ ವಿಮಾನದಲ್ಲಿದ್ದರು. ಈ ವರೆಗೆ 24 ಜನರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಹಾರ ಕಾರ್ಯಾಚರಣೆ ಭರದಿಂದ ಸಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹರಿದಾಡಿದ ರಕ್ಷಣಾ ಕಾರ್ಯಾ ಚರಣೆಯ ವಿಡಿಯೊ: ವಿಮಾನ ನಿಲ್ದಾಣಕ್ಕೆ ಸಮೀಪದಲ್ಲೇ ಇರುವ ಸರೋವರಕ್ಕೆ ವಿಮಾನ ಪತನ ವಾಗಿದ್ದರಿಂದ ವಿಮಾನ ಬಹುತೇಕ ಮುಳುಗಿದ ಸ್ಥಿತಿಯಲ್ಲಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ಮೀನುಗಾರರು ಹಾಗೂ ಪರಿಹಾರ ಕಾರ್ಯಕರ್ತರು ವಿಮಾನದೊಳಗೆ ಸಿಲುಕಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರಗೆ ತರುವುದಕ್ಕೆ ನೆರವಾದರು. ಈ ಕಾರ್ಯಾಚರಣೆಯ ವಿಡಿಯೊ ವ್ಯಾಪಕವಾಗಿ ಹರಿದಾಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.