ದಾರ್ ಎಸ್ ಸಲಾಂ: ತಾಂಜೇನಿಯಾದ ಅಧ್ಯಕ್ಷರಾಗಿದ್ದ ಜಾನ್ ಮಗುಫುಲಿ ಅವರ ಅಂತಿಮ ದರ್ಶನದ ವೇಳೆ ಮಾರ್ಚ್ 21ರಂದು ಇಲ್ಲಿನ ಸ್ಟೇಡಿಯಂನಲ್ಲಿ ಉಂಟಾದ ನೂಕುನುಗ್ಗಲು ಮತ್ತು ಕಾಲ್ತುಳಿತದಲ್ಲಿ 45 ಮಂದಿ ಮೃತಪಟ್ಟಿದ್ದರು ಎಂಬ ಮಾಹಿತಿಯನ್ನು ಪೊಲೀಸರು ಮಂಗಳವಾರ ಬಹಿರಂಗಪಡಿಸಿದ್ದಾರೆ.
ಮೂರು ವಾರಗಳ ಕಾಲ ನಿಗೂಢವಾಗಿ ಕಣ್ಮರೆಯಾಗಿದ್ದ 61 ವರ್ಷದ ಅಧ್ಯಕ್ಷ ಮಗುಫುಲಿ ಅವರು ಮಾರ್ಚ್ 17ರಂದು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿತ್ತು. ಹಲವು ನಗರಗಳಿಗೆ ಮೃತದೇಹವನ್ನು ಸಾಗಿಸಿ, ಸಾರ್ವಜನಿಕ ದರ್ಶನದ ವ್ಯವಸ್ಥೆ ಮಾಡಿದ ಬಳಿಕ ಮಾರ್ಚ್ 26ರಂದು ದೇಶದ ವಾಯವ್ಯ ಭಾಗದ ಛಾಟೊ ಎಂಬಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿತ್ತು. ದಾರ್ ಎಸ್ ಸಲಾಂನಲ್ಲಿ ನಡೆದ ಈ ಕಾಲ್ತುಳಿತ ದುರಂತವನ್ನು ನೂತನ ಅಧ್ಯಕ್ಷೆ ಸಮಿಲಾ ಸುಲುಹು ಆಡಳಿತ ಇದುವರೆಗೆ ಮುಚ್ಚಿಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.