ADVERTISEMENT

ಬಾಂಗ್ಲಾದೇಶ | ಶೇಖ್ ಹಸೀನಾ ಪಲಾಯನ: ಲೇಖಕಿ ತಸ್ಲಿಮಾ ನಸ್ರೀನ್‌ ವ್ಯಂಗ್ಯ

ಪಿಟಿಐ
Published 6 ಆಗಸ್ಟ್ 2024, 3:20 IST
Last Updated 6 ಆಗಸ್ಟ್ 2024, 3:20 IST
   

ಬೆಂಗಳೂರು: ಬಾಂಗ್ಲಾದೇಶದಲ್ಲಿ ರಾಜಕೀಯ ಹಿಂಸಾಚಾರದಿಂದಾಗಿ ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ದೇಶ ತೊರೆದಿರುವುದಕ್ಕೆ ಲೇಖಕಿ ತಸ್ಲೀಮಾ ನಸ್ರೀನ್‌ ಪ್ರತಿಕ್ರಿಯೆ ನೀಡಿದ್ದಾರೆ.

ಇಸ್ಲಾಂ ಕೋಮುವಾದಿಗಳನ್ನು ಮೆಚ್ಚಿಸಲು ಶೇಖ್ ಹಸೀನಾ ನನ್ನ ಬಾಂಗ್ಲಾದೇಶದಿಂದ ಹೊರ ಹಾಕಿದ್ದರು. ಈಗ ಅದೇ ಕೋಮುವಾದಿಗಳು ವಿದ್ಯಾರ್ಥಿ ಚಳವಳಿ ಮೂಲಕ ಶೇಖ್ ಹಸೀನಾ ಅವರನ್ನು ದೇಶ ತೊರೆಯುವಂತೆ ಮಾಡಿದರು ಎಂದು ಹೇಳಿದ್ದಾರೆ.

1999ರಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ನನ್ನ ತಾಯಿ ನೋಡಲು ಬಾಂಗ್ಲಾಕ್ಕೆ ತೆರಳಿದ್ದೆ. ಆಗ ಹಸೀನಾ ಕೋಮುವಾದಿಗಳನ್ನು ಮೆಚ್ಚಿಸಲು ನನ್ನ ಹೊರ ಹಾಕಿದರು. ಈಗ ಅದೇ ಕೋಮುವಾದಿಗಳು ಅವರನ್ನು ಹೊರ ಹಾಕಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. 

ADVERTISEMENT

ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಾಕಿದ್ದಾರೆ.

ಹಸೀನಾ ಅವರು ಸೋಮವಾರ ಮಿಲಿಟರಿ ವಿಮಾನದಲ್ಲಿ ಭಾರತಕ್ಕೆ ಪಲಾಯನ ಮಾಡಿದ್ದರು. ಇಲ್ಲಿಂದ ಅವರು ಇಂಗ್ಲೆಂಡ್‌ಗೆ ತೆರಳಿ ಆಶ್ರಯ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.