ADVERTISEMENT

ನ್ಯೂಜಿಲೆಂಡ್‌: ಕ್ರೈಸ್ಟ್‌ಚರ್ಚ್‌ ಮಸೀದಿಯಲ್ಲಿ ದಾಳಿ ಬಳಿಕ ಮೊದಲ ಬಾರಿ ಪ್ರಾರ್ಥನೆ

ಏಜೆನ್ಸೀಸ್
Published 23 ಮಾರ್ಚ್ 2019, 16:39 IST
Last Updated 23 ಮಾರ್ಚ್ 2019, 16:39 IST
ಅಲ್‌ನೂರ್‌ ಮಸೀದಿ
ಅಲ್‌ನೂರ್‌ ಮಸೀದಿ   

ಕ್ರೈಸ್ಟ್‌ಚರ್ಚ್‌: ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ ನಗರದ ಅಲ್‌ನೂರ್‌ ಮತ್ತು ಲಿನ್‌ವುಡ್‌ ಮಸೀದಿಗಳಲ್ಲಿ ನಡೆದ ಭೀಕರ ಗುಂಡಿನ ದಾಳಿಯ ಬಳಿಕ ಇದೇ ಮೊದಲ ಬಾರಿಗೆ ಶನಿವಾರ ಮತ್ತೆ ಪ್ರಾರ್ಥನೆ ನಡೆಯಿತು.

ಿಇದೇ 15ರಂದು ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಮಸೀದಿಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದ ಆಸ್ಟ್ರೇಲಿಯಾದ ಬ್ರೆಂಟನ್‌ ಟೆರ‍್ರಂಟ್‌ 50 ಜನರ ಸಾವಿಗೆ ಕಾರಣವಾಗಿದ್ದ. ಈ ಘಟನೆ ಕುರಿತು ತನಿಖೆ ನಡೆಸುತ್ತಿದ್ದ ಪೊಲೀಸರು ಭದ್ರತೆಯ ಕಾರಣ ಅಲ್‌ನೂರ್ ಮಸೀದಿಯನ್ನು ವಶಕ್ಕೆ ಪಡೆದಿದ್ದರು.

ಶನಿವಾರ ಮಸೀದಿಯನ್ನು ಸ್ಥಳೀಯ ಮುಸ್ಲಿಮರಿಗೆ ಮರಳಿಸಿದ್ದು, ಪ್ರಾರ್ಥನೆಗೆ ಅವಕಾಶ ನೀಡಲಾಗಿತ್ತು.

ADVERTISEMENT

‘ಮಸೀದಿ ಸಹಜ ಸ್ಥಿತಿಗೆ ಮರಳುತ್ತಿದ್ದು, ಒಮ್ಮೆಲೆ 15 ಜನರಿಗಷ್ಟೇ ಪ್ರಾರ್ಥನೆಗೆ ಅವಕಾಶ ನೀಡಲಾಗಿದೆ’ ಎಂದು ಮಸೀದಿಯ ಸ್ವಯಂಸೇವಕ ಸಯ್ಯದ್‌ ಹಸೀನ್‌ ಹೇಳಿದ್ದಾರೆ. ದಾಳಿಯ ನಂತರ ಮೊದಲಿಗೆ ಮಸೀದಿ ಪ್ರವೇಶಿಸಿದವರಲ್ಲಿ ಗುಂಡಿನ ದಾಳಿ ವೇಳೆ ಬದುಕುಳಿದ ವೊಹ್ರಾ ಮೊಹಮ್ಮದ್‌ ಹುಝೆಫ್‌ ಸಹ ಒಬ್ಬರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.