ಪ್ಯಾರಿಸ್: ವೀರ್ಯದಾನದ ಮೂಲಕ ನೂರಕ್ಕೂ ಹೆಚ್ಚು ಮಕ್ಕಳ ಜೈವಿಕ ತಂದೆ ಎಂದು ಹೇಳಿಕೊಂಡಿದ್ದ ಸಾಮಾಜಿಕ ಮಾಧ್ಯಮ ಟೆಲಿಗ್ರಾಂನ ಸಿಇಒ ಪಾವೆಲ್ ಡುರೊವ್ ಅವರನ್ನು ಫ್ರೆಂಚ್ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಈ ಸಂದರ್ಭದಲ್ಲಿದ್ದ ಜತೆಗಿದ್ದ ಮಹಿಳೆ ಅಸಲಿಗೆ ಗೆಳತಿಯೇ ಅಥವಾ ಇಸ್ರೇಲ್‌ನ ಗುಪ್ತಚರ ದಳ ಮೊಸಾದ್‌ನ ಏಜೆಂಟಳೇ ಎಂಬ ಚರ್ಚೆ ಈಗ ನಡೆಯುತ್ತಿದೆ.
ರಷ್ಯಾದ ಮಾರ್ಕ್ ಜುಕರ್‌ಬರ್ಗ್ ಎಂದೇ ಗುರುತಿಸಿಕೊಂಡಿದ್ದ ಡೊರೊವ್, 90 ಕೋಟಿ ಬಳಕೆದಾರರು ಇರುವ ತಮ್ಮ ಟೆಲಿಗ್ರಾಂ ಆ್ಯಪ್ ಮೂಲಕ ಅಪರಾಧಿಕ ಚಟುವಟಿಕೆ ನಡೆಸುತ್ತಿದ್ದಾರೆ ಎಂಬ ಆರೋಪ ಹೊತ್ತಿದ್ದಾರೆ.
ಡುರೊವ್ ಬಂಧನವಾದ ಸಂದರ್ಭದಲ್ಲಿ ಮಹಿಳೆಯೊಬ್ಬರು ಅವರೊಂದಿಗೆ ಇದ್ದರು. ಜೂಲಿ ವವಿಲೋವಾ ಎಂಬ ಇವರನ್ನು ಕೆಲವರು ಅವರ ಗೆಳತಿ ಎಂದಿದ್ದಾರೆ. ಡುರೊವ್ ಬಂಧನಕ್ಕೆ ಇವರೇ ಪ್ರಮುಖ ಕಾರಣ ಎಂದು ಇನ್ನಷ್ಟು ಮಂದಿ ಸಂದೇಹ ವ್ಯಕ್ತಪಡಿಸಿದ್ದಾರೆ.
24 ವರ್ಷದ ಜೂಲಿ ದುಬೈ ಮೂಲಕ ಕ್ರಿಪ್ಟೊ ತರಬೇತುದಾರರಾಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಇವರಿಗೆ 20 ಸಾವಿರಕ್ಕೂ ಹೆಚ್ಚು ಅನುಯಾಯಿಗಳಿದ್ದಾರೆ. ಇಂಗ್ಲಿಷ್, ರಷ್ಯನ್, ಸ್ಪ್ಯಾನಿಷ್ ಹಾಗೂ ಅರೆಬಿಕ್ ಭಾಷೆ ಬಲ್ಲವರು ಎಂದು ಬಳಸಿಕೊಂಡಿದ್ದರು. ಜೂಲಿ ಹಾಗೂ ಡುರೋವ್ ಇಬ್ಬರೂ ಕಜಾಕಿಸ್ತಾನ, ಕಿರ್ಗಿಸ್ತಾನ, ಅಜರ್‌ಬೈಜಾನ್‌ಗಳಿಗೆ ಭೇಟಿ ನೀಡಿದ್ದಾರೆ. ಅಲ್ಲಿನ ಚಿತ್ರಗಳನ್ನು ಇವರು ಒಟ್ಟಿಗೆ ಹಂಚಿಕೊಂಡಿದ್ದಾರೆ.
ಬಂಧನಕ್ಕೂ ಮೊದಲು ಈ ಜೋಡಿ ಖಾಸಗಿ ವಿಮಾನದಲ್ಲಿ ಪ್ಯಾರಿಸ್‌ಗೆ ಬಂದಿಳಿದಿದ್ದು ಸುದ್ದಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.