ಬಾಕು: ‘ಜಾಗತಿಕ ತಾಪಮಾನ ನಿಯಂತ್ರಿಸುವ ನಿಟ್ಟಿನಲ್ಲಿ ಮಹತ್ವಾಕಾಂಕ್ಷಿ ಕ್ರಮಗಳನ್ನು ಜಾರಿಗೊಳಿಸಬೇಕು. ಅದಕ್ಕಾಗಿ ಹಣಕಾಸು ವಿನಿಯೋಗಿಸಲು ಪರಿಷ್ಕೃತ ಗುರಿ ನಿಗದಿಪಡಿಸಬೇಕಾದ ಅಗತ್ಯವಿದ್ದು, ಪ್ರತಿ ರಾಷ್ಟ್ರದ ಹಿತಾಸಕ್ತಿಯನ್ನು ಗಣನೆಗೆ ತೆಗೆದು ಕೊಳ್ಳಬೇಕು’ ಎಂದು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಸೈಮನ್ ಸ್ಟಿಯಲ್ ಪ್ರತಿಪಾದಿಸಿದರು.
ಅಜರ್‌ಬೈಜಾನ್‌ನಲ್ಲಿ ಸೋಮವಾರ ಆರಂಭಗೊಂಡ ‘ಸಿಒಪಿ29’ ಹವಾಮಾನ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಹವಾಮಾನ ಬದಲಾವಣೆ ವಿಚಾರದಲ್ಲಿ ಜಾಗತಿಕ ನಾಯಕರು ತುರ್ತಾಗಿ ಸಂಘಟಿತರಾಗಿ ಕಾರ್ಯಪ್ರವೃತ್ತರಾಗಬೇಕು. ಹೆಚ್ಚಿನ ಪ್ರಗತಿಯ ಹೊರತಾಗಿಯೂ, ವಿಶ್ವದಲ್ಲಿ ತಾಪಮಾನ ಹೆಚ್ಚಳಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ’ ಎಂದರು.
‘ಹವಾಮಾನ ವೈಪರೀತ್ಯದ ಬಿಕ್ಕಟ್ಟು ನಿವಾರಿಸಲು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆಯ ಸಮಾವೇಶವು ಪ್ರಮುಖ ವೇದಿಕೆಯಾಗಿದ್ದು, ಪ್ರತಿ ರಾಷ್ಟ್ರವೂ ಇದರ ಹೊಣೆಗಾರಿಕೆ ಹೊರಬೇಕು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.