ಆಸ್ಟಿನ್ (ಎಪಿ): ಗರ್ಭಪಾತ ನಡೆಸಲು ರಾಜ್ಯದಲ್ಲಿನ ಕ್ಲಿನಿಕ್‌ಗಳಿಗೆ ಅವಕಾಶ ನೀಡುವ ಬಗ್ಗೆ ಕೆಳ ಹಂತದ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಅಮೆರಿಕದ ಟೆಕ್ಸಾಸ್ ಸುಪ್ರೀಂಕೋರ್ಟ್ ತಡೆಹಿಡಿದಿದೆ. ಪ್ರಕರಣದ ವಿಚಾರಣೆಯನ್ನು ಈ ತಿಂಗಳ ಅಂತ್ಯಕ್ಕೆ ಮುಂದೂಡಿದೆ.
1973ರಲ್ಲಿ, ರೋ ಮತ್ತು ವೇಡ್ ನಡುವಣ ಪ್ರಕರಣದ ವಿಚಾರಣೆ ನಡೆಸಿದ್ದ ಅಮೆರಿಕದ ಸುಪ್ರೀಂಕೋರ್ಟ್ ಗರ್ಭಪಾತಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿತ್ತು. ಇದೇ ಜೂನ್ 24 ರಂದು ಸುಪ್ರೀಂಕೋರ್ಟ್‌ನ ನ್ಯಾಯಪೀಠವೊಂದು ಗರ್ಭಪಾತ ನಿಷೇಧದ ಪರವಾಗಿ ತೀರ್ಪು ಪ್ರಕಟಿಸಿತ್ತು. ಇದಾದ ನಂತರವೂ ಟೆಕ್ಸಾಸ್‌ನ ಕೆಳ ಹಂತದ ನ್ಯಾಯಾಲಯವು ಗರ್ಭಪಾತ ನಡೆಸಲು ರಾಜ್ಯದಲ್ಲಿನ ಕ್ಲಿನಿಕ್‌ಗಳಿಗೆ ಅವಕಾಶ ನೀಡಿತ್ತು.
ಟೆಕ್ಸಾಸ್ ಸುಪ್ರೀಂಕೋರ್ಟ್‌ನ ತೀರ್ಪು ಹೊರಬಿದ್ದ ಬಳಿಕ ಸ್ಥಳೀಯ ಕ್ಲಿನಿಕ್‌ಗಳು ಗರ್ಭಪಾತ ಮಾಡುವುದನ್ನು ನಿಲ್ಲಿಸಿದ್ದು, ‘ಅಪಾಯಿಂಟ್‌ಮೆಂಟ್’ಗಳನ್ನೂ ರದ್ದು ಮಾಡುತ್ತಿವೆ ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.