ADVERTISEMENT

ಟೆಕ್ಸಾಸ್‌ ವಿ.ವಿಯಲ್ಲಿ ಭಾರತದ ಅಧ್ಯಯನ ಕೋರ್ಸ್‌ 

​ಪ್ರಜಾವಾಣಿ ವಾರ್ತೆ
Published 27 ಮೇ 2022, 13:45 IST
Last Updated 27 ಮೇ 2022, 13:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹ್ಯೂಸ್ಟನ್‌: ಅಮೆರಿಕದ ಟೆಕ್ಸಾಸ್ ಸದರ್ನ್‌ ಯುನಿವರ್ಸಿಟಿ (ಟಿಎಸ್‌ಯು) ಮತ್ತು ಭಾರತದ ಫೌಂಡೇಷನ್ ಫಾರ್ ಇಂಡಿಯಾ ಸ್ಟಡೀಸ್ (ಎಫ್‌ಐಎಸ್) ಜಂಟಿ ಸಹಭಾಗಿತ್ವದಲ್ಲಿ ಭಾರತದ ಕುರಿತ ಅಧ್ಯಯನ ಕೋರ್ಸ್‌ಗಳನ್ನು ಹ್ಯೂಸ್ಟನ್‌ ನಗರದ ಪದವಿ ಶಾಲೆಯಲ್ಲಿ ಆರಂಭಿಸಿವೆ.

ಅಮೆರಿಕದಲ್ಲಿ ಭಾರತದ ಕುರಿತ ಅಧ್ಯಯನ ಉತ್ತೇಜಿಸುವ ಈ ಪಾಲುದಾರಿಕೆಯು, ಎಫ್‌ಐಎಸ್‌ ಸಹಕಾರದೊಂದಿಗೆ ವಿಶ್ವವಿದ್ಯಾನಿಲಯದಲ್ಲಿ ಭಾರತ ಕೇಂದ್ರಿತ ಶೈಕ್ಷಣಿಕ ಕೋರ್ಸ್‌ಗಳನ್ನು ರೂಪಿಸಿ, ಕಾರ್ಯಗತಗೊಳಿಸಲಿದೆ ಎಂದು ಟಿಎಸ್‌ಯು ಪ್ರಕಟಣೆ ತಿಳಿಸಿದೆ.

‘ಭಾರತೀಯರು ನೀಡಿದ ಕೊಡುಗೆಗಳನ್ನು ಮತ್ತು ಭಾರತೀಯ ಪರಂಪರೆಯನ್ನುಭವಿಷ್ಯದ ಪೀಳಿಗೆಗೆ ಪರಿಚಯಿಸುವ ಶಾಶ್ವತ ಕೆಲಸ ಮಾಡುತ್ತೇವೆ’ ಎಂದು ಫೌಂಡೇಷನ್ ಫಾರ್ ಇಂಡಿಯಾ ಸ್ಟಡೀಸ್ ಸಂಸ್ಥಾಪಕ ಅಧ್ಯಕ್ಷ ಕೃಷ್ಣ ವಾವಿಲಾಲ ತಿಳಿಸಿದರು.

ADVERTISEMENT

2005ರಲ್ಲಿ ಸ್ಥಾಪಿಸಲಾದಎಫ್‌ಐಎಸ್‌ ಪ್ರತಿಷ್ಠಾನವು ಹ್ಯೂಸ್ಟನ್ ವಿಶ್ವವಿದ್ಯಾಲಯದಲ್ಲಿ 2006ರಲ್ಲಿ ಭಾರತ ಅಧ್ಯಯನ ಕಾರ್ಯಕ್ರಮ ಆರಂಭಿಸಿತು. ಮೊದಲಿಗೆ ಹಿಂದಿ ಭಾಷೆಯಲ್ಲಿಹಿಂದೂ ಧರ್ಮ ಹಾಗೂ ಜೈನ ಧರ್ಮದ ವಿಷಯಗಳನ್ನು ಒಳಗೊಂಡ ಕೋರ್ಸ್‌ ಪರಿಚಯಿಸಲಾಗಿತ್ತು. ಈಗ 12 ಕೋರ್ಸ್‌ಗಳಿಗೆ ವಿಸ್ತರಿಸಿದ್ದು, ಇದಕ್ಕೆ ಈಗ ವಿಶ್ವವಿದ್ಯಾಲಯವೇ ಅನುದಾನ ಒದಗಿಸುತ್ತಿದೆ ಎಂದುಕೃಷ್ಣ ವಾವಿಲಾಲ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.