ಬ್ಯಾಂಕಾಕ್: ಥಾಯ್ಲೆಂಡ್‌ನ ಎಚ್‌ಟಿಎಂಎಸ್ ಸುಖೋಥಾಯ್ ಹೆಸರಿನ ಯುದ್ಧ ನೌಕೆಯು ಭಾನುವಾರ ಮಧ್ಯರಾತ್ರಿ ಇಲ್ಲಿಯ ಬಾಂಗ್ ಸಫನ್ ಪಿಯೆರ್ ಕರಾವಳಿಯಲ್ಲಿ ಮುಳುಗಿದ್ದು, ಅದರಲ್ಲಿದ್ದ 75 ಜನರನ್ನು ಸೋಮವಾರ ಮಧ್ಯಾಹ್ನದ ವೇಳೆಗೆ ರಕ್ಷಿಸಲಾಗಿದೆ. ಇನ್ನೂ 31 ಜನರು ಕಾಣೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಜಾರಿಯಲ್ಲಿದೆ ಎಂದು ನೌಕಾಪಡೆ ತಿಳಿಸಿದೆ.
ಅಲೆಗಳು ರಭಸದಿಂದ ಅಪ್ಪಳಿಸಿದ್ದೇ ನೌಕೆ ಮುಳುಗಲು ಕಾರಣ ಎಂದು ಹೇಳಲಾಗಿದೆ ನೌಕಾಪಡೆಯ ಹಡಗುಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಬಳಸಿ ಶೋಧಕಾರ್ಯ ನಡೆಸಲಾಗಿದೆ. ಸಮುದ್ರದಲ್ಲಿ ಅಲೆಗಳ ರಭಸ ಜೋರಾಗಿದ್ದು, ಸಣ್ಣ ದೋಣಿಗಳನ್ನು ಶೋಧಕಾರ್ಯಕ್ಕೆ ಬಳಸಲು ಸಾಧ್ಯವಿಲ್ಲ ಎಂದು ಥಾಯ್ಲೆಂಡ್ ನೌಕಾಪಡೆ ತಿಳಿಸಿದೆ.
ನೌಕೆಯಲ್ಲಿದ್ದ ಎಲ್ಲರನ್ನೂ ರಕ್ಷಿಸುವುದು ನಮ್ಮ ಮೊದಲನೇ ಆದ್ಯತೆ. ಬಳಿಕವೇ ನೌಕೆಯನ್ನು ದಡಕ್ಕೆ ತರಲಾಗುವುದು ಎಂದು ಅಲ್ಲಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.