ADVERTISEMENT

ಲಿಬಿಯಾ ಪ್ರವಾಹ: 5 ಸಾವಿರಕ್ಕೂ ಹೆಚ್ಚು ಜನರ ಸಾವು

ಎಎಫ್‌ಪಿ
Published 13 ಸೆಪ್ಟೆಂಬರ್ 2023, 14:30 IST
Last Updated 13 ಸೆಪ್ಟೆಂಬರ್ 2023, 14:30 IST
ಡೇನಿಯಲ್‌ ಚಂಡಮಾರುತದಿಂದ ಉಂಟಾದ ಪ್ರವಾಹವು ಪೂರ್ವ ಲಿಬಿಯಾದ ಡೆರ್ನಾ ನಗರವನ್ನು ಅಕ್ಷರಶಃ ಗುಡಿಸಿಹಾಕಿದ್ದು, ಅವಶೇಷಗಳನಷ್ಟೇ ಉಳಿಸಿದೆ– ಎಎಫ್‌ಪಿ ಚಿತ್ರ
ಡೇನಿಯಲ್‌ ಚಂಡಮಾರುತದಿಂದ ಉಂಟಾದ ಪ್ರವಾಹವು ಪೂರ್ವ ಲಿಬಿಯಾದ ಡೆರ್ನಾ ನಗರವನ್ನು ಅಕ್ಷರಶಃ ಗುಡಿಸಿಹಾಕಿದ್ದು, ಅವಶೇಷಗಳನಷ್ಟೇ ಉಳಿಸಿದೆ– ಎಎಫ್‌ಪಿ ಚಿತ್ರ   

ಡೆರ್ನಾ: ಲಿಬಿಯಾದ ಪೂರ್ವ ಕರಾವಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸಿಲುಕಿ ಮೃತಪಟ್ಟವರ ಸಂಖ್ಯೆ 5,200ಕ್ಕೂ ಹೆಚ್ಚಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. 

‘ಡೆರ್ನಾ ಭಾಗದಲ್ಲಿ ಸಾವಿನ ಸಂಖ್ಯೆ‌ ಹೆಚ್ಚಾಗಿದೆ. ಏಳು ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ’ ಎಂದು ಪೂರ್ವ ಲಿಬಿಯಾದ ಆಂಬುಲೆನ್ಸ್‌ ಮತ್ತು ತುರ್ತು ಕೇಂದ್ರದ ವಕ್ತಾರ ಒಸಾಮಾ ಅಲಿ ಹೇಳಿದ್ದಾರೆ.

ಶೋಧ ಮತ್ತು ರಕ್ಷಣಾ ತಂಡಗಳು ಬೀದಿಗಳು, ಕಟ್ಟಡಗಳು ಮತ್ತು ಸಮುದ್ರದಿಂದ ಶವಗಳನ್ನು ಹೊರ ತೆಗೆಯುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಮೆಡಿಟರೇನಿಯನ್ ಚಂಡಮಾರುತ ಭಾನುವಾರ ರಾತ್ರಿ ಡೆರ್ನಾ ಕರಾವಳಿಗೆ ಅಪ್ಪಳಿಸುತ್ತಿದ್ದಂತೆ, ನಗರದ ಹೊರಗಿನ ಅಣೆಕಟ್ಟುಗಳು ಹೊಡೆದು, ಭಾರಿ ಸ್ಫೋಟದ ಶಬ್ದ ಕೇಳಿಸಿತ್ತು ಎಂದು ಡೆರ್ನಾ ನಿವಾಸಿಗಳು ಹೇಳಿದ್ದಾರೆ. 

ನೆಲೆ ಕಳೆದುಕೊಂಡ 30 ಸಾವಿರ ಜನರು: ಲಿಬಿಯಾ ನಗರದಲ್ಲಿ ಬುಧವಾರದವರೆಗೆ ಎರಡು ಸಾವಿರಕ್ಕೂ ಹೆಚ್ಚು ಶವಗಳನ್ನು ಅವಶೇಷಗಳಡಿಯಿಂದ ರಕ್ಷಣಾ ಸಿಬ್ಬಂದಿ ಹೊರತೆಗೆದಿದ್ದಾರೆ. ಈ ನಗರದಲ್ಲಿ ಸುಮಾರು 30 ಸಾವಿರ ಜನರು ನಿರಾಶ್ರಿತರಾಗಿದ್ದಾರೆ ಎಂದು ವಿಶ್ವಸಂಸ್ಥೆ ವಲಸಿಗರ ಏಜೆನ್ಸಿ ಅಧಿಕಾರಿಗಳು ಹೇಳಿದ್ದಾರೆ.

‘ನಗರದಲ್ಲಿ ಕನಿಷ್ಠ 10,000 ಜನರು ಇನ್ನೂ ಕಾಣೆಯಾಗಿದ್ದಾರೆ. ಡೆರ್ನಾ ಮತ್ತು ಇತರ ಪಟ್ಟಣಗಳಿಂದ 40,000 ಜನರನ್ನು ಸ್ಥಳಾಂತರಿಸಲಾಗಿದೆ’ ಎಂದು ರೆಡ್ ಕ್ರಾಸ್ ಸಂಸ್ಥೆ ಮತ್ತು ರೆಡ್ ಕ್ರೆಸೆಂಟ್ ಸೊಸೈಟಿಗಳ ಲಿಬಿಯಾ ರಾಯಭಾರಿ ತಮೆರ್ ರಂಜಾನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.