ADVERTISEMENT

ಇಸ್ರೇಲ್‌: ಇಬ್ಬರು ಯೋಧರ ಹತ್ಯೆ

ಏಜೆನ್ಸೀಸ್
Published 30 ಮೇ 2024, 14:26 IST
Last Updated 30 ಮೇ 2024, 14:26 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಜೆರುಸಲೆಂ: ಇಸ್ರೇಲ್‌ನ ವೆಸ್ಟ್‌ಬ್ಯಾಂಕ್‌ನಲ್ಲಿ ನಡೆದ ಕಾರ್‌–ರ್‍ಯಾಮ್ಮಿಂಗ್‌ ದಾಳಿಯಲ್ಲಿ (ಸ್ಫೋಟಕ ತುಂಬಿರುವ ವಾಹನ ಗುದ್ದಿಸಿ ದಾಳಿ ಮಾಡುವುದು) ತನ್ನ ಇಬ್ಬರು ಯೋಧರು ಮೃತಪಟ್ಟಿರುವುದಾಗಿ ಇಸ್ರೇಲ್‌ ಸೇನೆ ತಿಳಿಸಿದೆ.

‘ಪ್ಯಾಲೆಸ್ಟೀನ್‌ನ ನ್ಯಾಬ್ಲಸ್‌ ಸಮೀಪ ನಮ್ಮ ಸೈನಿಕರನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ. ಈ ಸಂಬಂಧ ಸೇನೆಯ ಹಿರಿಯ ಅಧಿಕಾರಿಗಳು ಪ್ರಾಥಮಿಕ ತನಿಖೆ ಕೈಗೊಂಡಿದ್ದಾರೆ. ಆರೋಪಿಯು ದಾಳಿಯ ಬಳಿಕ ಸ್ಥಳದಿಂದ ಪರಾರಿಯಾಗಿದ್ದು, ಆತನ ಪತ್ತೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ’ ಎಂದು ಸೇನೆಯು ತಿಳಿಸಿದೆ. 

ಇಸ್ರೇಲ್‌ ಪಡೆಗಳು ಹಮಾಸ್‌ ಮೇಲೆ ಯುದ್ಧ ಸಾರಿದ ಬಳಿಕ ವೆಸ್ಟ್‌ಬ್ಯಾಂಕ್‌ನಲ್ಲಿ ಹಿಂಸಾಚಾರ ಕೃತ್ಯಗಳು ಹೆಚ್ಚಳಗೊಂಡಿರುವ ನಡುವೆಯೇ ಈ ದಾಳಿ ನಡೆದಿದೆ.

ADVERTISEMENT

ಏತನ್ಮಧ್ಯೆ, ಈಜಿಪ್ಟ್‌ ಗಡಿಯೊಂದಿಗೆ ಹೊಂದಿಕೊಂಡಿರುವ ಗಾಜಾದ ಭೂ ಪ್ರದೇಶದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿರುವುದಾಗಿ ಇಸ್ರೇಲ್‌ ಸೇನೆ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.