ADVERTISEMENT

ಅಫ್ಗಾನಿಸ್ತಾನ: ಕೊಲೆ ಅಪರಾಧಿಗೆ ಸಾರ್ವಜನಿಕವಾಗಿ ಮರಣದಂಡನೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2024, 12:57 IST
Last Updated 26 ಫೆಬ್ರುವರಿ 2024, 12:57 IST
<div class="paragraphs"><p> ಮರಣದಂಡನೆ (ಪ್ರಾತಿನಿಧಿಕ ಚಿತ್ರ)</p></div>

ಮರಣದಂಡನೆ (ಪ್ರಾತಿನಿಧಿಕ ಚಿತ್ರ)

   

ಇಸ್ಲಾಮಾಬಾದ್: ಕೊಲೆ ಅಪರಾಧ ಸಾಬೀತಾದ ಕಾರಣ ತಾಲಿಬಾನ್‌ ಸರ್ಕಾರವು ನಜರ್ ಮೊಹಮ್ಮದ್ ಎನ್ನುವವನಿಗೆ ಅಫ್ಗಾನಿಸ್ತಾನದ ಉತ್ತರ ಪ್ರಾಂತ್ಯದಲ್ಲಿ ಸಾರ್ವಜನಿಕವಾಗಿ ಮರಣ ದಂಡನೆ ಜಾರಿಗೊಳಿಸಿದೆ.

ಈ ವ್ಯಕ್ತಿಗೆ ಕ್ರೀಡಾಂಗಣವೊಂದರಲ್ಲಿ ಗುಂಡಿಕ್ಕಿ ಮರಣದಂಡನೆ ಜಾರಿಗೊಳಿಸಲಾಯಿತು. ಐದು ದಿನಗಳಲ್ಲಿ ಈ ರೀತಿಯಲ್ಲಿ ಮರಣ ದಂಡನೆ ಜಾರಿಗೊಳಿಸಿದ ಮೂರನೆಯ ನಿದರ್ಶನ ಇದು.

ADVERTISEMENT

ಕೊಲೆಯಾಗಿದ್ದ ವ್ಯಕ್ತಿಯ ಸಹೋದರನು ರೈಫಲ್‌ನಿಂದ ಐದು ಬಾರಿ ಗುಂಡು ಹಾರಿಸಿ, ಕೊಲೆ ಮಾಡಿದವನಿಗೆ ಮರಣ ದಂಡನೆಯನ್ನು ಜಾರಿಗೊಳಿಸಿದ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಕ್ರೀಡಾಂಗಣದ ಸುತ್ತ ಬಿಗಿ ಭದ್ರತೆ ಇತ್ತು. ಶಿಕ್ಷೆಗೆ ಗುರಿಯಾದವರಿಗೆ, ಸಾರ್ವಜನಿಕವಾಗಿ ಶಿಕ್ಷೆ ವಿಧಿಸುವ ತಾಲಿಬಾನ್ ಸರ್ಕಾರದ ಕ್ರಮವನ್ನು ವಿಶ್ವ ಸಂಸ್ಥೆಯು ಬಲವಾಗಿ ಖಂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.