ವಿಯೆನ್ನಾ: ಅಫ್ಗಾನಿಸ್ತಾನದಲ್ಲಿ ಕಳೆದ ವರ್ಷ ತಾಲಿಬಾನಿಗಳಿಂದ ಬಂಧನಕ್ಕೆ ಒಳಗಾಗಿದ್ದ ತನ್ನ ದೇಶದ ಪ್ರವಾಸಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಆಸ್ಟ್ರಿಯಾ ಸರ್ಕಾರ ತಿಳಿಸಿದೆ.
‘ಬಿಡುಗಡೆಯಾಗಿರುವ ಹರ್ಬರ್ಟ್ ಫ್ರಿಟ್ಜ್(84) ಅಫ್ಗಾನಿಸ್ತಾನದಿಂದ ಹೊರಟು ಭಾನುವಾರ ದೋಹಾ ತಲುಪಿದ್ದಾರೆ. ಆಸ್ಟ್ರಿಯಾಕ್ಕೆ ಬರುವ ಮುನ್ನ ಅವರಿಗೆ ಅಗತ್ಯವಿದ್ದರೆ ವೈದ್ಯಕೀಯ ಚಿಕಿತ್ಸೆ ನೀಡಲಾಗುವುದು’ ಎಂದು ಆಸ್ಟ್ರಿಯಾದ ವಿದೇಶಾಂಗ ಇಲಾಖೆ ತಿಳಿಸಿದೆ.
‘ಅಫ್ಗಾನಿಸ್ತಾನದಲ್ಲಿ ಬಂಧನದಲ್ಲಿದ್ದ ನಮ್ಮ ದೇಶದ ಪ್ರಜೆಯ ಬಿಡುಗಡೆಗೆ ಸಹಾಯ ಮಾಡಿದ ಕತಾರ್ ದೊರೆ ಶೇಖ್ ತನಿಮ್ ಬಿನ್ ಹಮದ್ ಆಲ್ ತಮಿ ಮತ್ತು ಅವರ ತಂಡಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ’ ಎಂದು ಆಸ್ಟ್ರಿಯಾದ ಚಾನ್ಸಲರ್ ಕಾರ್ಲ್ ನೆಹಮ್ಮೆರ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
‘ನಿಯತಕಾಲಿಕವೊಂದರಲ್ಲಿ ಫ್ರಿಟ್ಜ್ ಅವರು ತಾಲಿಬಾನ್ ಕುರಿತಾಗಿ ಬರೆದಿರುವ ಲೇಖನ ಪ್ರಕಟವಾದ ಬೆನ್ನಲ್ಲೇ ಅವರನ್ನು ತಾಲಿಬಾನ್ ಸರ್ಕಾರ ಬಂಧಿಸಿದೆ’ ಎಂದು ಆಸ್ಟ್ರಿಯಾದ ಡೆರ್ ಸ್ಟಾಂಡರ್ಡ್ ಪತ್ರಿಕೆ ಕಳೆದ ವರ್ಷ ವರದಿ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.