ಲಂಡನ್: ಮಕ್ಕಳು ನಿಕೋಟಿನ್ ವ್ಯಸನಿಗಳಾಗುವುದನ್ನು ತಪ್ಪಿಸಲು ಏಕಬಳಕೆಯ ಇ-ಸಿಗರೇಟ್ ಮತ್ತಿತರ ಸಾಧನಗಳನ್ನು ನಿಷೇಧಿಸಲು ಬ್ರಿಟನ್ ಮುಂದಾಗಿದೆ.
ಬ್ರಿಟನ್‌ನಲ್ಲಿ ಸದ್ಯ 18 ವರ್ಷಕ್ಕಿಂತ ಕಿರಿಯರಿಗೆ ಇ-ಸಿಗರೇಟ್ ಮತ್ತು ತಂಬಾಕು ಮಾರಾಟ ಮಾಡುವುದು ಅಕ್ರಮವಾಗಿದೆ. ಆದರೆ, ಕಳೆದ ಮೂರು ವರ್ಷಗಳಲ್ಲಿ ಯುವಜನರ ಇ-ಸಿಗರೇಟ್ ಬಳಕೆ ಮೂರು ಪಟ್ಟು ಹೆಚ್ಚಾಗಿದೆ. ಅಗ್ಗದ ಮತ್ತು ಬಣ್ಣ ಬಣ್ಣದ ಇ-ಸಿಗರೇಟ್‌ಗಳು ಯುವಜನತೆಯ ಪಾಲಿಗೆ ಆಕರ್ಷಣೆಯಾಗಿವೆ.
ಏಕಬಳಕೆ ಇ-ಸಿಗರೇಟ್ ನಿಷೇಧಿಸುವುದರ ಜೊತೆಗೆ ಮಕ್ಕಳನ್ನು ಸೆಳೆಯಲು ವಿವಿಧ ಸುವಾಸನೆಗಳನ್ನು ಬೀರುವ ವಸ್ತುಗಳನ್ನು ಬಳಸಲಾಗುತ್ತಿದ್ದು, ಅವಕ್ಕೆ ಮಿತಿ ಹೇರಲಾಗುತ್ತದೆ. ಹಾಗೆಯೇ ಅವುಗಳ ಪ್ಯಾಕೆಟ್‌ಗಳನ್ನು ಕಣ್ಮನ ಸೆಳೆಯದಂತೆ ರೂಪಿಸಲು ಸೂಚಿಸಲಾಗುತ್ತದೆ ಎಂದು ಬ್ರಿಟನ್ ಸರ್ಕಾರ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.