ADVERTISEMENT

ವಿಶ್ವದ ಅತಿದೊಡ್ಡ ಹಡಗುಯಾನ ಆರಂಭ

ಏಜೆನ್ಸೀಸ್
Published 27 ಜನವರಿ 2024, 15:44 IST
Last Updated 27 ಜನವರಿ 2024, 15:44 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಮಿಯಾಮಿ: ಸುಮಾರು 10 ಸಾವಿರ ಜನರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ವಿಶ್ವದ ಅತಿದೊಡ್ಡ ಹಡಗು ತನ್ನ ಮೊದಲ ಪ್ರಯಾಣವನ್ನು ಮಿಯಾಮಿ ಬಂದರಿನಿಂದ ಶನಿವಾರ ಆರಂಭಿಸಿದೆ. 

1200 ಅಡಿ ಉದ್ದದ ಈ ಹಡಗು ದಕ್ಷಿಣ ಫ್ಲಾರಿಡಾದಿಂದ ಏಳು ದಿನಗಳ ಮೊದಲ ಯಾನ ಆರಂಭಿಸಿದೆ.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿದ ರಾಯಲ್ ಕೆರಿಬಿಯನ್ ಗ್ರೂಪ್ ಅಧ್ಯಕ್ಷ ಮತ್ತು ಕಾರ್ಯ ನಿರ್ವಾಹಕ ಅಧಿಕಾರಿ ಜಾಸನ್ ಲಿಬರ್ಟಿ ಅವರು, ‘ವಿಶ್ವದ ಜನತೆಗೆ ಅತ್ಯುತ್ತಮವಾದ ಪಯಾಣದ ಅನುಭವಗಳನ್ನು ನೀಡಬೇಕೆಂಬುದು ಐವತ್ತಕ್ಕಿಂತ ಹೆಚ್ಚಿನ ವರ್ಷಗಳ ಕನಸಾಗಿತ್ತು’ ಎಂದು ಹೇಳಿದ್ದಾರೆ. 

2022ರ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ಈ ಹಡಗನ್ನು ಪ್ರದರ್ಶಿಸಲಾಯಿತು. ಒಂದೇ ದಿನದಲ್ಲಿ ಇದರ ಅತಿ ಹೆಚ್ಚಿನ ಬುಕಿಂಗ್‌ ಆಯಿತು. 53 ವರ್ಷಗಳ ಇತಿಹಾಸದಲ್ಲಿ ಇದು ದಾಖಲೆಯೇ ಸರಿ ಎಂದಿದ್ದಾರೆ.

ಈ ಹಡಗಿನ ಮೇಲಿನ 20 ಡೆಕ್‌ಗಳನ್ನು ಎಂಟು ಭಾಗಗಳನ್ನಾಗಿ ವಿಂಗಡಿಸಲಾಗಿದೆ. ಏಳು ಈಜುಕೊಳಗಳು, ಆರು ವಾಟರ್‌ಸ್ಲೈಡ್‌ಗಳು, ಐಸ್ ಸ್ಕೇಟಿಂಗ್ ರಿಂಕ್, ಥಿಯೇಟರ್ ಮತ್ತು 40ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳು, ಬಾರ್‌ಗಳು ಮತ್ತು ಲಾಂಜ್‌ಗಳನ್ನು ಒಳಗೊಂಡಿರುವ ಈ ಹಡಗು, 2350 ಸಿಬ್ಬಂದಿ ಹಾಗೂ ಗರಿಷ್ಠ 7600 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.