ADVERTISEMENT

ದಾನ ನೀಡುವಿಕೆ ಆಚರಣೆಯಲ್ಲಿ 30 ಸಾವಿರ ಬೌದ್ಧ ಭಿಕ್ಕುಗಳು

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 20:00 IST
Last Updated 8 ಡಿಸೆಂಬರ್ 2019, 20:00 IST
ದಾನ ನೀಡಿಕೆ ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಬೌದ್ಧ ಭಿಕ್ಕುಗಳು –ಎಎಫ್‌ಪಿ ಚಿತ್ರ
ದಾನ ನೀಡಿಕೆ ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಬೌದ್ಧ ಭಿಕ್ಕುಗಳು –ಎಎಫ್‌ಪಿ ಚಿತ್ರ   

ಮ್ಯಾನ್ಮಾರ್‌: ಮ್ಯಾನ್ಮಾರ್‌ನ ಮ್ಯಾಂಡಲೆ ನಗರದಲ್ಲಿ ಭಾನುವಾರ ಮುಂಜಾನೆ ಆಯೋಜಿಸಿದ್ದ ದಾನ ನೀಡುವಿಕೆ ಆಚರಣೆಯಲ್ಲಿ 30 ಸಾವಿರಕ್ಕೂ ಅಧಿಕ ಬೌದ್ಧ ಭಿಕ್ಕುಗಳು ಭಾಗವಹಿಸಿದ್ದರು.

ಕೊರೆಯುವ ಚಳಿಯ ನಡುವೆಯೂ, ಫುಟ್ಬಾಲ್‌ ಮೈದಾನದಷ್ಟು ದೊಡ್ಡದಾಗಿದ್ದ ಜಾಗದಲ್ಲಿ ಬರಿಗಾಲಿನಲ್ಲಿ ಮ್ಯಾನ್ಮಾರ್ ಹಾಗೂ ಥಾಯ್ಲೆಂಡ್‌ನಿಂದ ಆಗಮಿಸಿದ್ದ ಭಿಕ್ಕುಗಳು ಸೇರಿದ್ದರು. ಕಾರ್ಯಕ್ರಮದಲ್ಲಿ ಧ್ಯಾನ ಹಾಗೂ ಪ್ರಾರ್ಥನೆ ಮಾಡಿದ ಭಿಕ್ಕುಗಳು ದಾನ ಸ್ವೀಕರಿಸಿದರು.

ಥಾಯ್ಲೆಂಡ್‌ ಮೂಲದ ಧಮ್ಮಕಾಯ ಪ್ರತಿಷ್ಠಾನಈ ಕಾರ್ಯಕ್ರಮವನ್ನು ಆಯೋಜಿಸಿತ್ತು. 2017ರಲ್ಲಿ ಹಣ ದುರುಪಯೋಗ ಹಗರಣಕ್ಕೆ ಸಂಬಂಧಿಸಿದಂತೆ ಬ್ಯಾಂಕಾಕ್‌ನಲ್ಲಿನ ಪ್ರತಿಷ್ಠಾನದ ಧಮ್ಮಕಾಯ ದೇವಸ್ಥಾನದ ಆವರಣವನ್ನು ವಶಕ್ಕೆ ಪಡೆಯಲಾಗಿತ್ತು. ಅಂದಾಜು ಸಾವಿರ ಎಕರೆ ಪ್ರದೇಶದಲ್ಲಿ ಸಾವಿರಾರು ಅಧಿಕಾರಿಗಳು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದರು. ಪ್ರತಿಷ್ಠಾನವು ಥೈಲ್ಯಾಂಡ್‌ನಲ್ಲಿ ಎರಡು ದಾನ ಕಾರ್ಯಕ್ರಮವನ್ನು ಆಯೋಜಿಸಿತ್ತು. ಇದರಲ್ಲಿ 10 ಸಾವಿರಕ್ಕೂ ಅಧಿಕ ಬೌದ್ಧ ಭಿಕ್ಕುಗಳು ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.