ADVERTISEMENT

ಐರೋಪ್ಯ ಒಕ್ಕೂಟ, ಕೃಷಿ ನೀತಿ ವಿರುದ್ಧ ಪ್ರತಿಭಟನೆ: ಮ್ಯಾಡ್ರಿಡ್‌ಗೆ ರೈತರ ರ‍್ಯಾಲಿ

ಏಜೆನ್ಸೀಸ್
Published 21 ಫೆಬ್ರುವರಿ 2024, 15:44 IST
Last Updated 21 ಫೆಬ್ರುವರಿ 2024, 15:44 IST
<div class="paragraphs"><p>ರಾಯಿಟರ್ಸ್ ಚಿತ್ರ</p></div>

ರಾಯಿಟರ್ಸ್ ಚಿತ್ರ

   

ಮ್ಯಾಡ್ರಿಡ್‌ : ಐರೋಪ್ಯ ಒಕ್ಕೂಟ ಮತ್ತು ಸ್ಥಳೀಯ ಕೃಷಿ ನೀತಿಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ಭಾಗವಾಗಿ ಹಾಗೂ ಉತ್ಪಾದನಾ ವೆಚ್ಚ ಹೆಚ್ಚಳ ನಿವಾರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನೂರಾರು ರೈತರು ತಮ್ಮ ಟ್ರಾಕ್ಟರ್‌ಗಳೊಂದಿಗೆ ಬುಧವಾರ ಮ್ಯಾಡ್ರಿಡ್‌ ಕಡೆಗೆ ರ‍್ಯಾಲಿ ಆರಂಭಿಸಿದರು.

ಸುಮಾರು 500 ಟ್ರ್ಯಾಕ್ಟರ್‌ಗಳೊಂದಿಗೆ ರೈತರು ರ‍್ಯಾಲಿ ಕೈಗೊಂಡರು.  ಸರ್ಕಾರದ ನಿರ್ಬಂಧಗಳಿಂದಾಗಿ ಅನೇಕ ಟ್ರಾಕ್ಟರ್‌ಗಳು ನಗರದ ಹೊರವಲಯದಲ್ಲಿ ಉಳಿಯಬೇಕಾಗಲಿದೆ ಎಂದು ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.

ADVERTISEMENT

ಇತ್ತೀಚಿನ ವಾರಗಳಲ್ಲಿ ಇದೇ ರೀತಿಯ ಪ್ರತಿಭಟನೆಗಳು ಈ ಭಾಗದಲ್ಲಿ ವ್ಯಾಪಕವಾಗಿ ನಡೆದಿವೆ. 27-ರಾಷ್ಟ್ರಗಳ ಐರೋಪ್ಯ ಒಕ್ಕೂಟದ ಪರಿಸರ ಮತ್ತು ಇತರ ವಿಷಯಗಳ ಮೇಲಿನ ನೀತಿಗಳು ರೈತರಿಗೆ ಆರ್ಥಿಕ ಹೊರೆ ಉಂಟು ಮಾಡಿವೆ. ಅಲ್ಲದೆ, ಉತ್ಪಾದನೆಯ ವೆಚ್ಚ ಹೆಚ್ಚಾಗಲಿದೆ ಎಂದು ರೈತರು ದೂರಿದ್ದಾರೆ.

ಸ್ಪೇನ್ ಮತ್ತು ಐರೋಪ್ಯ ಒಕ್ಕೂಟದ ಯುರೋಪಿಯನ್ ಕಮಿಷನ್ ಇತ್ತೀಚಿನ ವಾರಗಳಲ್ಲಿ ಕೆಲವು ರಿಯಾಯಿತಿಗಳನ್ನು ಪ್ರಕಟಿಸಿದೆ. ಆದರೆ, ಅವು ಸಾಕಾಗುವುದಿಲ್ಲವೆಂದು ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.