ADVERTISEMENT

ಕೆನಡಾ: ಕೋವಿಡ್‌ ನಿರ್ಬಂಧಗಳ ವಿರುದ್ಧ ಪ್ರತಿಭಟನೆ 

ಏಜೆನ್ಸೀಸ್
Published 30 ಜನವರಿ 2022, 13:17 IST
Last Updated 30 ಜನವರಿ 2022, 13:17 IST
ಕೆನಡಾದ ಒಟ್ಟಾವಾದಲ್ಲಿ ಸಂಸತ್ತಿನ ಮುಂದೆ ಕೋವಿಡ್ ಆದೇಶಗಳು ಮತ್ತು ನಿರ್ಬಂಧಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ಎಎಫ್‌ಪಿ ಚಿತ್ರ
ಕೆನಡಾದ ಒಟ್ಟಾವಾದಲ್ಲಿ ಸಂಸತ್ತಿನ ಮುಂದೆ ಕೋವಿಡ್ ಆದೇಶಗಳು ಮತ್ತು ನಿರ್ಬಂಧಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ಎಎಫ್‌ಪಿ ಚಿತ್ರ   

ಒಟ್ಟಾವಾ: ಕೆನಡಾದಲ್ಲಿ ವಿಧಿಸಲಾಗಿರುವ ಕಡ್ಡಾಯ ಲಸಿಕೆ, ಮಾಸ್ಕ್ ಬಳಕೆ, ಲಾಕ್‌ಡೌನ್ ಹಾಗೂ ಇತರ ನಿರ್ಬಂಧಗಳ ವಿರುದ್ಧ ಸಾವಿರಾರು ಮಂದಿ ಇಲ್ಲಿ ಪ್ರತಿಭಟನೆ ನಡೆಸಿದರು.

ಒಟ್ಟಾವಾದ ರಾಷ್ಟ್ರೀಯ ಯುದ್ಧ ಸ್ಮಾರಕ ಮೈದಾನದಲ್ಲಿ ಸಾವಿರಾರು ಜನ ಜಮಾಯಿಸಿ ಘೋಷಣೆ ಕೂಗಿದರು. ನಂತರ ಪೊಲೀಸರು ಅವರನ್ನು ಅಲ್ಲಿಂದ ಸ್ಥಳಾಂತರಗೊಳ್ಳಲು ಸೂಚಿಸಿದರು.

ಕೆಲವು ಪ್ರತಿಭಟನಾಕಾರರು ಕೋವಿಡ್‌ ನಿರ್ಬಂಧಗಳನ್ನು ಫ್ಯಾಸಿಸಂಗೆ ಹೋಲಿಸಿದ್ದಾರೆ. ಕೆನಡಾದ ಧ್ವಜವನ್ನು ತಲೆಕೆಳಗಾಗಿಸಿ ನಾಜಿ ಸಂಕೇತಗಳನ್ನು ಪ್ರದರ್ಶಿಸಿದ್ದಾರೆ. ಕೆಲವರು ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್‌ ಟ್ರುಡೊ ವಿರುದ್ಧ ಘೋಷಣೆ ಕೂಗಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.