ADVERTISEMENT

ಭಾರತ ಸಂಜಾತ ಮೂವರು ನ್ಯಾಯಾಧೀಶರ ಪ್ರಮಾಣವಚನ

ಪಿಟಿಐ
Published 2 ಜನವರಿ 2023, 14:32 IST
Last Updated 2 ಜನವರಿ 2023, 14:32 IST
   

ಹ್ಯೂಸ್ಟನ್‌: ಅಮೆರಿಕದ ಫೋರ್ಟ್‌ ಬೆಂಡ್‌ ಕೌಂಟಿಯ ನ್ಯಾಯಾಧೀಶರಾಗಿ ಭಾರತೀಯ ಮೂಲದ ಮೂವರು ಪ್ರಮಾಣವಚನ ಸ್ವೀಕರಿಸಿದರು.

ಭಾನುವಾರ ನಡೆದ ಸಮಾರಂಭದಲ್ಲಿ ಜೂಲಿ ಎ.ಮ್ಯಾಥೀವ್‌, ಕೆ.ಪಿ.ಜಾರ್ಜ್‌ ಮತ್ತು ಸುರೇಂದ್ರನ್‌ ಕೆ. ಪಟೇಲ್‌ ಅವರು ಹೊಸದಾಗಿ ಆಯ್ಕೆಯಾದ ಮತ್ತು ಮರು ಆಯ್ಕೆಯಾದ ಇತರೆ ನ್ಯಾಯಾಧೀಶರೊಂದಿಗೆ ಪ್ರಮಾಣವಚನ ಸ್ವೀಕರಿಸಿದರು.

ಮೂವರೂ ಕೇರಳ ಮೂಲದವರಾಗಿದ್ದು, ಮ್ಲಾಥೀವ್‌ ಮತ್ತು ಕೆ.ಪಿ. ಜಾರ್ಜ್‌ ಎರಡನೇ ಬಾರಿಗೆ ನ್ಯಾಯಾಧೀಶರಾಗಿ ನೇಮಕವಾಗಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.