ADVERTISEMENT

ಅಮೆರಿಕದಲ್ಲಿ ಮತ್ತೊಂದು ಗುಂಡಿನ ದಾಳಿ ಪ್ರಕರಣ: ದಾಳಿಕೋರ ಸೇರಿ ಮೂವರು ಸಾವು

ಐಎಎನ್ಎಸ್
Published 3 ಜೂನ್ 2022, 6:49 IST
Last Updated 3 ಜೂನ್ 2022, 6:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ಅಮೆರಿಕದ ಐಒವಾರಾಜ್ಯದ ಚರ್ಚ್‌ವೊಂದರ ಹೊರಗೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ದಾಳಿಕೋರ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ರಾಜಧಾನಿ ಡೇಸ್‌ ಮೊಯಿನೆಸ್‌ನಿಂದ 50 ಕಿ.ಮೀ ದೂರದಲ್ಲಿರುವ ಸ್ಟೋರಿ ಕೌಂಟಿಯಅಮೆಸ್‌ ಪಟ್ಟಣದಲ್ಲಿ ಗುರುವಾರ ಸಂಜೆ ಈ ಪ್ರಕರಣ ವರದಿಯಾಗಿದೆ ಎಂದು 'ಕ್ಸಿನುವಾ' ಸುದ್ದಿಸಂಸ್ಥೆ ವರದಿ ಮಾಡಿದೆ.

ಕಾರ್ನರ್‌ಸ್ಟೋನ್‌ ಚರ್ಚ್‌ನ ಪಾರ್ಕಿಂಗ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಇಬ್ಬರನ್ನು ಗುಂಡಿಕ್ಕಿ ಹತ್ಯೆಮಾಡಿದ್ದಾನೆ ಎಂದು ಹಲವರು ಕರೆ ಮಾಡಿ ತಿಳಿಸಿದರು ಎಂದುಸ್ಟೋರಿ ಕೌಂಟಿಯ ಶೆರಿಫ್‌ ಕಚೇರಿಯು ಟ್ವಿಟರ್‌ನಲ್ಲಿ ಮಾಹಿತಿ ನೀಡಿದೆ.

ADVERTISEMENT

'ಮೂವರು ಮೃತಪಟ್ಟಿದ್ದಾರೆ. ಅದರಲ್ಲಿ ಒಬ್ಬನನ್ನು ಶೂಟರ್ ಎಂದು ಗುರುತಿಸಲಾಗಿದೆ. ಬಂದೂಕುಧಾರಿ ತನಗೆತಾನೇ ಗುಂಡು ಹೊಡೆದುಕೊಂಡು ಸಾವಿಗೀಡಾಗಿದ್ದಾನೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕದಲ್ಲಿ ಇತ್ತೀಚೆಗೆ ಗುಂಡಿನ ದಾಳಿ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ.ಅಮೆರಿಕದಲ್ಲಿ ಈ ವರ್ಷ ಕನಿಷ್ಠ 233 ಸಾಮೂಹಿಕ ಗುಂಡಿನ ದಾಳಿ ಪ್ರಕರಣಗಳು ವರದಿಯಾಗಿವೆ ಎಂದು ಗನ್‌ ವಯಲೆನ್ಸ್‌ ಆರ್ಕೈವ್‌ ಹೇಳಿದೆ.

ಟೆಕ್ಸಾಸ್‌ ಹಾಗೂ ನ್ಯೂಯಾರ್ಕ್‌ನಲ್ಲಿ ಇತ್ತೀಚೆಗೆ ನಡೆದ ಗುಂಡಿನ ದಾಳಿಯಲ್ಲಿ 19 ಮಕ್ಕಳು ಸೇರಿದಂತೆ 31 ಜನರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಬಂದೂಕುಗಳನ್ನು ಖರೀದಿಸುವುದಕ್ಕೆ ಸಂಬಂಧಿಸಿದ ವಯೋಮಿತಿಯನ್ನು ಹೆಚ್ಚಿಸುವ ಮಸೂದೆಯನ್ನು ಅಮೆರಿಕ ಸಂಸತ್‌ ಸಿದ್ಧಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.