ಹ್ಯೂಸ್ಟನ್: ಅಮೆರಿಕದ ಟೆಕ್ಸಾಸ್ನ ಲ್ಯಾಂಪಾಸಾಸ್ ಕೌಂಟಿ ಬಳಿ ಬುಧವಾರ ನಡೆದ ಕಾರು ಅಪಘಾತದಲ್ಲಿ ಭಾರತ ಮೂಲದ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ.
ಲಿಯಾಂಡರ್ ಮೂಲದ ಅರವಿಂದ ಮಣಿ (45), ಇವರ ಪತ್ನಿ ಪ್ರದೀಪಾ ಅರವಿಂದ (40), ಪುತ್ರಿ ಆಂಡ್ರಿಲ್ ಅರವಿಂದ (17) ಮೃತರು ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ತಂದೆ–ತಾಯಿಯ ಜೊತೆ ಪುತ್ರ ಆಂಡ್ರಿಯನ್ (14) ಪ್ರಯಾಣಿಸದಿದ್ದರಿಂದ ಬದುಕುಳಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.