ADVERTISEMENT

ಅಫ್ಗಾನಿಸ್ತಾನ: ತಾಲಿಬಾನ್‌ ಆಡಳಿತದಲ್ಲೂ ಬದಲಾಗದ ಆರ್ಥಿಕ ಪರಿಸ್ಥಿತಿ

ಏಜೆನ್ಸೀಸ್
Published 12 ಆಗಸ್ಟ್ 2024, 14:35 IST
Last Updated 12 ಆಗಸ್ಟ್ 2024, 14:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾಬೂಲ್‌: ಅಫ್ಗಾನಿಸ್ತಾನದ ಆಡಳಿತವನ್ನು ತಾಲಿಬಾನ್‌ ಸಂಘಟನೆಯು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಂಡು ಮೂರು ವರ್ಷಗಳಾದರೂ, ಅಲ್ಲಿನ ಆರ್ಥಿಕ ಪರಿಸ್ಥಿತಿ ಸುಧಾರಿಸಿಲ್ಲ.

ಅಫ್ಗಾನಿಸ್ತಾನದ 4 ಕೋಟಿ ಜನಸಂಖ್ಯೆಯ ಪೈಕಿ ಮೂರನೇ ಒಂದರಷ್ಟು ಜನರು ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಇದೆ. ತಾಲಿಬಾನ್‌ ಆಡಳಿತವು ಅಫ್ಗಾನಿಸ್ತಾನದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದರೂ ವಿದೇಶಿ ಹೂಡಿಕೆ ಹರಿದು ಬಂದಿಲ್ಲ ಹಾಗೂ ಮೂಲಸೌಕರ್ಯಗಳ ಕೊರತೆಯಿಂದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತಿಲ್ಲ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ಮುಂದಿನ ಮೂರು ಆರ್ಥಿಕ ವರ್ಷಗಳಲ್ಲಿಯೂ ಅಫ್ಗಾನಿಸ್ತಾನವು ಶೂನ್ಯ ಬೆಳವಣಿಗೆ ದಾಖಲಿಸಲಿದೆ ಎಂದು ವಿಶ್ವಬ್ಯಾಂಕ್‌ ಎಚ್ಚರಿಸಿದೆ. 

ಈ ಎಲ್ಲ ಸಮಸ್ಯೆಗಳ ನಡುವೆಯೂ ಕೆಲವೊಂದು ಆಶಾದಾಯಕ ಬೆಳವಣಿಗೆ ಕಂಡುಬಂದಿದೆ ಎಂದು ಅಫ್ಗಾನಿಸ್ತಾನ ಸರ್ಕಾರ ಹೇಳಿದೆ. ದೇಶದ ಕರೆನ್ಸಿಯು ಸಮತೋಲನ ಕಾಯ್ದುಕೊಂಡಿದೆ. ಭ್ರಷ್ಟಾಚಾರ ಪ್ರಮಾಣ ಇಳಿಕೆಯಾಗಿದೆ ಹಾಗೂ ತೆರಿಗೆ ಸಂಗ್ರಹದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ ಎಂದು ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.