ಬಿಜಿಂಗ್: ಚೀನಾಕ್ಕೆ ಸೇರಿದ ಚೋಂಗ್‌ಕಿಂಗ್ ಜಿಂಗ್ ಬಿ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗಿನ ಜಾವ ಟಿಬೆಟ್ ಏರ್‌ಲೈನ್ಸ್‌ನ ವಿಮಾನವೊಂದು ಟೇಕ್ ಆಫ್ ಆಗುವ ವೇಳೆ ರನ್‌ವೇನಲ್ಲಿ ಹೊತ್ತಿ ಉರಿದಿರುವ ಘಟನೆ ನಡೆದಿದೆ.
ಈ ವಿಮಾನದಲ್ಲಿ 113 ಪ್ರಯಾಣಿಕರು ಹಾಗೂ 9 ಜನ ಸಿಬ್ಬಂದಿ ಇದ್ದರು. ಯಾವುದೇ ಪ್ರಾಣಾಪಾಯ ಆಗಿಲ್ಲ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಎಎಫ್‌ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಏರ್‌ಬಸ್ ಎ319 ಹೆಸರಿನ ಈ ವಿಮಾನಚೋಂಗ್‌ಕಿಂಗ್‌ನಿಂದ ಟಿಬೆಟ್‌ನ ರಾಜಧಾನಿ ಲ್ಹಾಸಾಗೆ ತೆರಳುತಿತ್ತು. ದುರ್ಘಟನೆಯ ವಿಡಿಯೊ ವಿಮಾನ ನಿಲ್ದಾಣದ ಸಿಸಿಟಿವಿಯಲ್ಲಿ ದಾಖಲಾಗಿದೆ.
ಕಳೆದ ತಿಂಗಳಷ್ಟೇ ಚೀನಾದ ‘ಚೀನಾ ಈಸ್ಟರ್ನ್ ಏಲ್‌ಲೈನ್ಸ್’ ವಿಮಾನವೊಂದು ಗುಡ್ಡಗಾಡು ಪ್ರದೇಶದಲ್ಲಿ ಅಪಘಾತಕ್ಕೆ ಈಡಾಗಿ 132 ಜನ ಮೃತಪಟ್ಟಿದ್ದರು. ವಿಚಿತ್ರವೆಂದರೆ ಈ ದುರಂತಕ್ಕೆ ಇದುವರೆಗೆ ಅಧಿಕೃತ ಕಾರಣಗಳು ತಿಳಿದು ಬಂದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.